ಪುತ್ತೂರು: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ ಶಾಲಾ ಆರಂಭವನ್ನು ಶಾಲಾ ಪೋಷಕರೋರ್ವರು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಸಾಲಿನಲ್ಲಿ ನಿಂತು ಒಬ್ಬೊರಾಗಿ ಬಂದು ತಮ್ಮ ಶಿಕ್ಷಕರ ಕೈಯಿಂದ ಸಿಹಿತಿಂಡಿ, ಉಡುಗೊರೆ ಪಡೆದುಕೊಂಡು ತಮ್ಮ ತರಗತಿಯನ್ನು ಪ್ರವೇಶಿಸಿ ಸಂತಸ ಪಟ್ಟರು. ಈ ಸಂಧರ್ಭದಲ್ಲಿ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿಯರಾದ ಜಯಶ್ರೀ ಸಿ ಸಾಲ್ಯನ್, ಎಲ್ಸಿ ಲಸ್ರಾದೋ, ನೂರ್ಜಹಾನ್, ಖುರ್ಷಿದ್, ಅನ್ನಪೂರ್ಣೆಶ್ವರಿ, ಚಂದ್ರಾವತಿ, ದಿವ್ಯ, ಚೇತನಾ ಜೈನ್, ಮಮತಾ ಆರ್, ವನಿತಾ ಶೆಟ್ಟಿ ಹಾಫಿಲಾ, ನೀಲಮ್ಮ ಉಪಸ್ಥಿತರಿದ್ದರು.