ಬಪ್ಪಳಿಗೆ ಅಂಬಿಕಾ ಪ.ಪೂ.ವಿದಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

0

ಅಧ್ಯಕ್ಷೆ: ಶ್ರೀಲಕ್ಷ್ಮೀ ಸುರೇಶ್ ಉಪಾಧ್ಯಕ್ಷ: ಚಿನ್ಮಯ್ ಕಾರ್ಯದರ್ಶಿ : ಕೆ.ಎಲ್.ಶಶಾಂಕ್ ಜ.ಕಾರ್ಯದರ್ಶಿ : ವೈಷ್ಣವಿ

ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಸೋಮವಾರ ನಡೆಯಿತು. ಅಧ್ಯಕ್ಷರಾಗಿ ಶ್ರೀಲಕ್ಷ್ಮಿ ಸುರೇಶ್, ಉಪಾಧ್ಯಕ್ಷರಾಗಿ ಎಸ್.ಚಿನ್ಮಯ್, ಕಾರ್ಯದರ್ಶಿಯಾಗಿ ಕೆ.ಎಲ್. ಶಶಾಂಕ್, ಜತೆ ಕಾರ್ಯದರ್ಶಿಯಾಗಿ ವೈಷ್ಣವಿ ಎಸ್., ಬಾಲಕಿಯರ ವಸತಿ ನಿಲಯದ ನಾಯಕಿಯರಾಗಿ ಧೃತಿ ಭಟ್ ಮತ್ತು ಮನ್ಮಿತ ಆಯ್ಕೆಯಾದರು.

ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ರವರ ಮಾರ್ಗದರ್ಶನದಲ್ಲಿ ಚುನಾವಣಾಧಿಕಾರಿಗಳಾಗಿ ಪ್ರದೀಪ್ ಕೆ.ವೈ., ಚುನಾವಣಾ ಶಿಸ್ತು ಪಾಲಕರಾಗಿ ಸುಚಿತ್ರ ಪ್ರಭು ಹಾಗೂ ಶ್ವೇತಾ ಕೆ.ವಿ., ಮತಗಟ್ಟೆ ಪಾಲಕರಾಗಿ ಗೀತಾ ಸಿ.ಕೆ., ಅಕ್ಷತಾ ಎಮ್, ಜಗದೀಶ ಎಂ.ಎಸ್, ಭರತ್ ಬಿ, ಜೀವಿತ ಕೆ.ಎಸ್, ರಂಜಿತ್ ಎಚ್.ಸಿ. ಕಾರ್ಯನಿರ್ವಹಿಸಿದರು. ಉಪನ್ಯಾಸಕೇತರ ವರ್ಗದವರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಅರಿವನ್ನು ಮೂಡಿಸಿದರು.

LEAVE A REPLY

Please enter your comment!
Please enter your name here