ಪುತ್ತೂರು: ಅಂತರರಾಷ್ಟ್ರೀಯ ಲಯನ್ಸ್ ನ ಜಿಲ್ಲೆ 317ಡಿ, ರೀಜನ್ 4, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ 2025-26ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ನೂತನ ಅಧ್ಯಕ್ಷರಾಗಿ ಕೆ.ಇಬ್ರಾಹಿಂ ಹಾಜಿ, ಕಾರ್ಯದರ್ಶಿಯಾಗಿ ದೇವಣ್ಣ ರೈ, ಕೋಶಾಧಿಕಾರಿಯಾಗಿ ಎಂಜೆಎಫ್ ರಮೇಶ್ ಆಳ್ವ ರವರು ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ ಮುಖ್ಯ ಸಲಹೆಗಾರರಾಗಿ ಎಂಜೆಎಎಫ್ ಕಾವು ಹೇಮನಾಥ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾಗಿ ಜಗನ್ನಾಥ ರೈ ಗುತ್ತು, ಪ್ರಥಮ ಉಪಾಧ್ಯಕ್ಷರಾಗಿ ಮೋಹನದಾಸ ಶೆಟ್ಟಿ, ದ್ವಿತೀಯ ಉಪಾಧ್ಯಕ್ಷರಾಗಿ ಅಮ್ಮು ರೈ ಅಂಕೊತ್ತಿಮಾರ್, ತೃತೀಯ ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ, ಎಲ್.ಸಿ.ಐ.ಎಫ್ ಸಂಯೋಜಕರಾಗಿ ಎಂಜೆಎಫ್ ದಿವ್ಯನಾಥ ಶೆಟ್ಟಿ, ಸರ್ವೀಸ್ ಚೇರ್ ಪರ್ಸನ್ ಆಗಿ ಎಂಜೆಎಫ್ ರಮೇಶ್ ರೈ ಸಾಂತ್ಯ, ಕ್ಲಬ್ ಆಡಳಿತಾಧಿಕಾರಿಯಾಗಿ ಅನಿತಾ ಹೇಮನಾಥ ಶೆಟ್ಟಿ, ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ ಆಗಿ ಸಿ.ಎಚ್ ಅಝೀಝ್, ಕ್ಲಬ್ ಪಿ.ಆರ್.ಒ ಆಗಿ ದಿವೀಶ್ ರೈ ದೆಂಬಲೆ, ಕ್ಲಬ್ ಮಾರ್ಕೆಟಿಂಗ್ ಕೋ-ಆರ್ಡಿನೇಟರ್ ಆಗಿ ಇಸ್ಮಾಯಿಲ್ ಹಾಜಿ, ಮೆಂಬರ್ಸ್ ಶಿಪ್ ಚೇರ್ ಪರ್ಸನ್ ಆಗಿ ಎಂಜೆಎಫ್ ಅಬ್ದುಲ್ ಖಾದರ್ ಹಾಜಿ, ಕ್ಲಬ್ ಟೇಮರ್ ಆಗಿ ಸುಭಾಶ್ಚಂದ್ರ ರೈ ಕರ್ನೂರು, ಕ್ಲಬ್ ಟೇಲ್ ಟ್ವಿಸ್ಡರ್ ಆಗಿ ಕಾರ್ತಿಕ್ ಆಳ್ವ, ನಿರ್ದೇಶಕರಾಗಿ ಅಶೋಕ್ ಶೆಟ್ಟಿ ಕೆ.ಸಿ, ಉದನೇಶ್ವರ ಭಟ್, ಮಹೇಶ್ ರೈ ಅಂಕೊತ್ತಿಮಾರ್, ಜಯಪ್ರಕಾಶ್ ರೈ ನೂಜಿಬೈಲು, ದಿನೇಶ್ ಗೌಡ, ಮೋನಪ್ಪ ಪೂಜಾರಿ, ಅಬ್ದುಲ್ ರಹಿಮಾನ್ ಬಿ.ಕೆ, ಸುರೇಖಾ ಡಿ.ಶೆಟ್ಟಿ, ಶ್ರೀಶ ಕುಮಾರ್, ಡಾ.ವಾಸ್ತವಿ ಶೆಟ್ಟಿ, ಎಂಜೆಎಫ್ ಡಾ.ರಂಜಿತಾ ಶೆಟ್ಟಿ, ಸುಬ್ರಾಯ ಬಲ್ಯಾಯ, ಸವಿತಾ ಅಶೋಕ್ ಶೆಟ್ಟಿ, ಪಿಎಂಜೆಎಫ್ ಬಿ.ಪಾವನರಾಮರವರು ಆಯ್ಕೆಯಾಗಿದ್ದಾರೆ.
ನಾಳೆ ಪದಪ್ರದಾನ..
ಜೂ.15ರಂದು ಕಾವು ಮುಖ್ಯ ರಸ್ತೆಯ ಸಮುದಾಯ ಭವನದಲ್ಲಿ ನಡೆಯುವ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಜಿಲ್ಲೆ 317ಡಿ ಇದರ ಮಾಜಿ ಜಿಲ್ಲಾ ಗವರ್ನರ್ ಎಂಜೆಎಫ್ ಎಂ.ಅರುಣ್ ಶೆಟ್ಟಿರವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಲಿದ್ದಾರೆ. ಚಾರ್ಟರ್ ನೈಟ್ ಗೌರವ ಅತಿಥಿಗಳಾಗಿ 2025-26ರ ಜಿಲ್ಲೆ 317ಡಿ ಇದರ ಜಿಲ್ಲಾ ಪಿ.ಆರ್.ಒ ಎಂಜೆಎಫ್ ಸುದರ್ಶನ್ ಪಡಿಯಾರ್ ರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ರೈ ಗುತ್ತು, ಕಾರ್ಯದರ್ಶಿ ದಿವೀಶ ರೈ ದೆಂಬಲೆ, ಕೋಶಾಧಿಕಾರಿ ಕೆ.ಇಬ್ರಾಹಿಂ ಹಾಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.