





ಉಪ್ಪಿನಂಗಡಿ: ಬೆಳ್ತಂಗಡಿ ಮೊಕ್ಕಾಂ ಮುಗಿಸಿ ಭಾಗಮಂಡಲಕ್ಕೆ ತೆರಳುತ್ತಿದ್ದ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ ಉಪ್ಪಿನಂಗಡಿಯಲ್ಲಿ ಭಕ್ತರು ಫಲಪುಷ್ಪ ಸಮರ್ಪಿಸಿ ಭಕ್ತಿಪೂರ್ವಕ ಗೌರವ ಸಲ್ಲಿಸಿದರು.


ಉಪ್ಪಿನಂಗಡಿಯ ಶಿವದರ್ಶನ್ ಪೆಟ್ರೋಲ್ ಪಂಪು ಬಳಿ ಜಮಾಯಿಸಿದ ಭಕ್ತ ಗಣ ಸ್ವಾಮೀಜಿಯವರಿಗೆ ಹೂ ಹಾರ ಹಾಕಿ ಫಲಪುಷ್ಪವನ್ನಿತ್ತು ನಮಸ್ಕರಿಸಿದರು. ಈ ವೇಳೆ ಸ್ವಾಮೀಜಿಯವರು ಮಂತ್ರಾಕ್ಷತೆಯನ್ನಿತ್ತು ಹರಸಿದರು.





ಶ್ರೀ ಲಕ್ಷ್ಮೀ ವೆಂಕರಮಣ ದೇವಳದ ಆಡಳಿತ ಮೊಕ್ತೇಸರ ಗಣೇಶ್ ಶೆಣೈ, ಮೊಕ್ತೇಸರರಾದ ನಾಗರಾಜ ಭಟ್, ಅನಂತರಾಯ ಕಿಣಿ, ಪ್ರಮುಖರಾದ ಮಾಧವ ನಾಯಕ್, ಉಪೇಂದ್ರ ಪೈ, ಹರೀಶ್ ಕಿಣಿ, ಸತೀಶ್ ಕಿಣಿ, ಕರಾಯ ಗಣೇಶ್ ನಾಯಕ್, ಯು ರಾಜೇಶ್ ಪೈ, ವಿನಾಯಕ್ ಪ್ರಭು, ಗಿರಿಧರ್ ನಾಯಕ್, ರಾಘವೇಂದ್ರ ಪ್ರಭು, ವಿವೇಕಾನಂದ ಪ್ರಭು, ಸಂದೀಪ್ ಭಟ್, ನಾಗೇಶ್ ನಾಯಕ್ , ಮಂಜುನಾಥ ನಾಯಕ್ , ರಾಮಕೃಷ್ಣ ಪ್ರಭು, ರವೀಂದ್ರ ಭಟ್ ಮೊದಲಾದವರು ಭಾಗವಹಿಸಿದರು.









