ಮಕ್ಕಳಿಂದ ಹಿರಿಯರವರೆಗಿನ ಎಲ್ಲಾ ಬಗೆಯ ಸಿದ್ಧ ಉಡುಪುಗಳಿಗೆ ರೂ.219/- ಮಾತ್ರ
ಪುತ್ತೂರು: ಪುಟಾಣಿ ಮಕ್ಕಳಿಂದ, ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವಂಥ ಹಲವು ಬಗೆಯ, ವಿನೂತನ ಶೈಲಿಯ ರೆಡಿಮೇಡ್ ಉಡುಪುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ನೀಡಲು ಸಿದ್ಧವಾಗಿರುವ ಹೆಸರಾಂತ ಸಂಸ್ಥೆ ’ನ್ಯೂ ಚೆನ್ನೈ ಶಾಪಿಂಗ್’ ಕೆಲ ದಿನಗಳವರೆಗೆ ಆಯೋಜಿಸಿರುವ ಬೃಹತ್ ಶಾಪಿಂಗ್ ಹಬ್ಬ ಮುಖ್ಯರಸ್ತೆ ಅರುಣಾ ಕಲಾಮಂದಿರ ಸಭಾಭವನದಲ್ಲಿ ಜೂ.13ರಂದು ಪ್ರಾರಂಭಗೊಂಡಿದ್ದು, ಗ್ರಾಹಕರು ಮೆಚ್ಚಿನ ಉಡುಪುಗಳನ್ನು ಖರೀದಿಸುವ ಮೂಲಕ ಮೊದಲ ದಿನವೇ ಶಾಪಿಂಗ್ ಹಬ್ಬಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ.

ಮಳಿಗೆಯಲ್ಲಿ ಮನಸೂರೆಗೊಳ್ಳುವಂತಹ ಬಣ್ಣ-ಬಣ್ಣದ ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು, ಜೆರ್ಕಿನ್ಸ್ ಹಾಗೂ ಬಾಬಸೂಟ್ ಇವೆಲ್ಲವೂ ಒಂದೇ ಸೂರಿನಡಿಯಲ್ಲಿ ಸಿಗಲಿದ್ದು ಕೇವಲ 219/- ಬೆಲೆಯಲ್ಲೇ ಮೇಲಿನ ಎಲ್ಲಾ ರೀತಿಯ ಉತ್ಪನ್ನಗಳೂ ಲಭ್ಯವಿದೆ ಹಾಗೂ ಗೃಹೋಪಯೋಗಿ ವಸ್ತುಗಳಾದ ಟಾಯ್ಸ್ ಮತ್ತು ಗಿಫ್ಟ್, ಟೆಡ್ಡಿ ಬೀರ್, ಲೇಡೀಸ್ ಬ್ಯಾಗ್, ಟೆಡ್ಡಿ ಬ್ಯಾಗ್, ಕಾಲೇಜ್ ಬ್ಯಾಗ್, ಲಗೇಜ್ ಬ್ಯಾಗ್, ಸ್ಕೂಲ್ ಬ್ಯಾಗ್, ಸ್ಟೀಲ್ ಪಾತ್ರೆಗಳು, ಅಲ್ಯೂಮಿನಿಯಂ ಪಾತ್ರೆಗಳು, ಇಂಡಾಲಿಯಂ ಪಾತ್ರೆಗಳು, ವಿವಿಧ ಬಗೆಯ ಮ್ಯಾಟ್‌ಗಳು, ಪ್ಲಾಸ್ಟಿಕ್ ಐಟಮ್ಸ್, ಗೋಡೆ ಗಡಿಯಾರಗಳು, ಚಪ್ಪಲಿಗಳು ಮುಂತಾದವುಗಳು ಕೇವಲ ರೂ.159/-ಕ್ಕೆ ಲಭ್ಯವಿದೆ. ಪುತ್ತೂರಿನ ಜನತೆ ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನೂ ಸಂಭ್ರಮಿಸೋ ಅವಕಾಶವನ್ನು ನ್ಯೂ ಚೆನ್ನೈ ಶಾಪಿಂಗ್ ನೀಡಿದ್ದು, ಶಾಪಿಂಗ್ ಪ್ರಿಯರು ಇದರ ಲಾಭವನ್ನು ಪಡೆದುಕೊಳ್ಳಬಹುದೆಂದು ಆಯೋಜಕರು ತಿಳಿಸಿದ್ದಾರೆ. ಆದಿತ್ಯವಾರವೂ ತೆರೆದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7871847284ಗೆ ಸಂಪರ್ಕಿಸಿ.


