ಪುತ್ತೂರು: ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಸಾದ್ ಬಿ.ಕಲ್ಲರ್ಪೆ ಹಾಗೂ ಕಾರ್ಯದರ್ಶಿ ಜಯಲಕ್ಷ್ಮಿ ಡಿ.ಎಸ್ ಪುನರಾಯ್ಕೆಯಾಗಿದ್ದಾರೆ.
ಈಶ ವಿದ್ಯಾಲಯದಲ್ಲಿ ಜೂ.15ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬೇಬಿ ಸಿ.ಪಾಟಾಳಿ ಹಾಗೂ ಮಹೇಶ್ ಆಲಂಕಾರು, ಖಜಾಂಚಿಯಾಗಿ ರವಿ ಬಾಕಿತ್ತಿಮಾರ್, ಜೊತೆ ಕಾರ್ಯದರ್ಶಿಯಾಗಿ ಧನುಷಾ ಎನ್.ಎಸ್, ಸಂಘಟನಾ ಕಾರ್ಯದರ್ಶಿ ಮನೋಹರ್ ನೈತಾಡಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೌಮ್ಯ ವಿನಯ್ ಕಡಮಜಲು ಆಯ್ಕೆಯಾಗಿದ್ದಾರೆ.