





ರಾಮಕುಂಜ: ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಮಕುಂಜ ಬಿಜೆಪಿ ಶಕ್ತಿಕೇಂದ್ರದ ಆಶ್ರಯದಲ್ಲಿ ಜೂ.23ರಂದು ಬೆಳಿಗ್ಗೆ ರಾಮಕುಂಜ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.


ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ, ತಾ.ಪಂ.ಮಾಜಿ ಸದಸ್ಯರೂ ಆದ ಧರ್ಮಪಾಲ ರಾವ್ ಕಜೆ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ರಾಮಕುಂಜ ಗ್ರಾ.ಪಂ.ಸದಸ್ಯ ಪ್ರಶಾಂತ್ ಆರ್.ಕೆ.ಅವರು ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು ಸೃಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಒಂದು ವರ್ಗದ ಜನರ ಒಲೈಕೆಗಾಗಿ ಹಿಂದೂಗಳನ್ನು ದಮನಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದರು.





ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಪ್ರದೀಪ್ ಬಾಂತೊಟ್ಟು, ಸೂರಪ್ಪ ಕುಲಾಲ್, ರೋಹಿಣಿ ಆನ, ಸುಜಾತ ಕಾಪಿಕಾಡು, ಮಾಲತಿ ಕದ್ರ, ಕುಶಾಲಪ್ಪ ಗೌಡ, ಜಯಶ್ರೀ ಇರ್ಕಿ, ಭವಾನಿ ಸಂಪ್ಯಾಡಿ, ಮಾಜಿ ಅಧ್ಯಕ್ಷ ಪೂವಪ್ಪ ಗೌಡ ಸಂಪ್ಯಾಡಿ, ಶಕ್ತಿಕೇಂದ್ರದ ಅಧ್ಯಕ್ಷ ಉಮೇಶ್ ದೇವಾಡಿಗ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಮೋನಪ್ಪ ಕುಲಾಲ್, ಬಿಜೆಪಿ ಕಾರ್ಯಕರ್ತರಾದ ವಿರೇಂದ್ರ ಪಾಲೆತ್ತಡ್ಡ, ಮಹೇಶ್ ಹಳೆನೇರೆಂಕಿ, ಶರತ್ ಕೆದಿಲ, ಹರೀಶ್ ಹೊಸಮಣ್ಣು, ಜೀವನ್ ಶೆಟ್ಟಿ ಪಡಿಪಿರೆ, ಗಣೇಶ್ ಶಾರದಾನಗರ, ಶರತ್ಚಂದ್ರ ಶಾರದಾನಗರ ಮತ್ತಿತರರು ಉಪಸ್ಥಿತರಿದ್ದರು.








