ಅಂಬಿಕಾದಲ್ಲಿ 2025-26ನೇ ಸಾಲಿನ ನೀಟ್ ರಿಪೀಟರ‍್ಸ್ ಬ್ಯಾಚ್‌ಗೆ ದಾಖಲಾತಿ

0

ಇಲ್ಲಿ ತರಬೇತಿ ಪಡೆದ ಪ್ರತಿ ಮೂರು ಮಂದಿಯಲ್ಲಿ ಇಬ್ಬರಿಗೆ ವೈದ್ಯಕೀಯ ಶಿಕ್ಷಣ


ಪುತ್ತೂರು:
ವೈದ್ಯರಾಗಬೇಕೆಂಬುದು ಅನೇಕ ವಿದ್ಯಾರ್ಥಿಗಳ ಕನಸು. ಬಹುಮಂದಿ ಹೆತ್ತವರೂ ತಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣವನ್ನು ಹೊಂದಿ ಸಮಾಜದಲ್ಲಿ ಪ್ರತಿಷ್ಟಿತ ವೈದ್ಯರೆನಿಸಬೇಕೆಂಬ ಕನಸನ್ನು ಹೊಂದಿಯೇ ಇರುತ್ತಾರೆ. ಈ ನೆಲೆಯಲ್ಲಿ ಪಿಯು ಹಂತದ ಶಿಕ್ಷಣದ ಜತೆಜತೆಗೆ ನೀಟ್ ಪರೀಕ್ಷಾ ತರಬೇತಿಗೂ ಹಲವಾರು ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಳ್ಳುವುದಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸುವಲ್ಲಿ ಅವರು ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಗಳಿಸುವ ಅಂಕವೇ ಪ್ರಧಾನ.
ತನ್ಮಧ್ಯೆ, ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವಲ್ಲಿ ವಿಫಲರಾದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ನೀಟ್ ರಿಪೀಟರ‍್ಸ್ ಬ್ಯಾಚ್‌ಗೆ ದಾಖಲಾತಿ ಹೊಂದಿ ಮುಂದಿನ ಒಂದು ವರ್ಷ ಪೂರ್ತಿ ನೀಟ್ ತರಬೇತಿಯನ್ನಷ್ಟೇ ಪಡೆದು ಮತ್ತೊಮ್ಮೆ ಪರೀಕ್ಷೆ ಎದುರಿಸಿ ತಮ್ಮ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳುವುದಿದೆ. ಅತ್ಯುತ್ತಮ ತರಬೇತಿ ದೊರಕಿ, ಸಾಕಷ್ಟು ಪ್ರಯತ್ನ ನಡೆಸಿದರೆ ರಿಪೀಟರ‍್ಸ್ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಕೈಗೆಟಕುವಂತೆ ಮಾಡುವುದು ಕಷ್ಟಸಾಧ್ಯವೇನಲ್ಲ.


ಹೀಗೆ ದ್ವಿತೀಯ ಪಿಯು ಪೂರೈಸಿ ತಕ್ಷಣ ನೀಟ್ ಪರೀಕ್ಷೆಯನ್ನೂ ಎದುರಿಸಿ ಉತ್ತಮ ಅಂಕ ಗಳಿಸುವಲ್ಲಿ ವಿಫಲರಾದ ವಿದ್ಯಾರ್ಥಿಗಳಿಗಾಗಿಯೇ ದಕ್ಷಿಣ ಕನ್ನಡದ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ’ನೀಟ್ ರಿಪೀಟರ‍್ಸ್ ಬ್ಯಾಚ್’ ತರಗತಿಗಳನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಂಬಿಕಾ ಸಂಸ್ಥೆ ಕಳೆದ ಹಲವು ವರ್ಷಗಳಿಂದ ನೀಟ್ ಪರೀಕ್ಷೆಗೆ ಅತ್ಯುತ್ಕೃಷ್ಟ ತರಬೇತಿ ನೀಡುತ್ತಿದ್ದು ಪ್ರತಿ ವರ್ಷವೂ ಈ ಸಂಸ್ಥೆಯಿಂದ ಶೇಕಡಾ 75ರಿಂದ 80ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಹೊಂದುತ್ತಿದ್ದಾರೆ.


ಪ್ರತಿದಿನ ಪ್ರಾಯೋಗಿಕ ಅನುಭವ, ವಾರಕ್ಕೊಮ್ಮೆ ಪರೀಕ್ಷೆಗಳನ್ನು ಈ ನೀಟ್ ರಿಫಿಟರ‍್ಸ್ ತರಗತಿಗಳಲ್ಲಿ ನಡೆಸಲಾಗುತ್ತದೆ. ತತ್ಪರಿಣಾಮದಲ್ಲಿ ವಿದ್ಯಾರ್ಥಿಗಳಿಗೆ ನೀಟ್ ಸಿಲೆಬಸ್‌ನ ಪ್ರತಿಯೊಂದು ವಿಷಯಗಳಲ್ಲೂ ಮಾದರಿ ಪರೀಕ್ಷೆ ನಡೆದಂತಹ ಅನುಭವ ಲಭ್ಯವಾಗಿ ಅಂತಿಮವಾದ ಪರೀಕ್ಷೆ ಸುಲಭಸಾಧ್ಯವೆನಿಸುತ್ತದೆ. ಜತೆಗೆ ಅನುಭವಿ ಪ್ರಾಧ್ಯಾಪಕರಿಂದ ನಿರಂತರ ಸಲಹೆ ಸೂಚನೆಗಳು, ಪರಸ್ಪರ ಸಂವಹನದ ಮೂಲಕ ಚರ್ಚಾ ತರಗತಿಗಳು, ವ್ಯಾಪಕವಾದ ಓದಿಗೆ ಪೂರಕವಾದ ಅಧ್ಯಯನ ಸಾಮಾಗ್ರಿಗಳು.. ಹೀಗೆ ಹತ್ತು ಹಲವು ವಿಷಯಗಳನ್ನು ನೀಟ್ ರಿಪೀಟರ‍್ಸ್ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ನೀಟ್ ಪರೀಕ್ಷೆ ಬರೆದವರಲ್ಲಿ 2:3 ಅನುಪಾತದಲ್ಲಿ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜುಗಳನ್ನು ಪ್ರವೇಶಿಸುತ್ತಿದ್ದಾರೆ.


ಪ್ರಸ್ತುತ ವರ್ಷದ ನೀಟ್ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಟಾಪ್ ಐದು ಕಾಲೇಜುಗಳಲ್ಲಿ ಮತ್ತೊಮ್ಮೆ ಅಂಬಿಕಾ ಸ್ಥಾನ ಪಡೆದಿದೆ. ತನ್ಮೂಲಕ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಜೆಇಇ, ನೀಟ್, ಸಿಇಟಿ ಹಾಗೂ ಪಿಯು ಮೊದಲಾದ ಪರೀಕ್ಷೆಗಳ ಫಲಿತಾಂಶದಲ್ಲಿ ದ.ಕ. ಜಿಲ್ಲೆಯ ಟಾಪ್ ಐದು ಕಾಲೇಜುಗಳಲ್ಲಿ ಗಳಿಸುತ್ತಿರುವ ತನ್ನ ಸ್ಥಾನವನ್ನು ಈ ವರ್ಷವೂ ಅಬಾಧಿತವಾಗಿ ಕಾಪಾಡಿಕೊಂಡು ಬಂದಿದೆ. ತರಗತಿ ನಡೆಸುವ ಅನುಭವಿ ಶಿಕ್ಷಕರು ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿ ಪರಿವರ್ತಿಸುತ್ತಿದ್ದಾರೆ.


ವಿದ್ಯಾರ್ಥಿಗಳಿಗೆ ಬೇಕಾದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ತೀವ್ರ ನಿಗಾ ಇರಿಸಿ ಆ ವಿದ್ಯಾರ್ಥಿಯು ತನ್ನ ಗುರಿಯನ್ನು ಈಡೇರಿಸಿಕೊಳ್ಳುವಂತೆ ನಮ್ಮ ಸರ್ವ ಸಹಕಾರವನ್ನೂ ನೀಡಲಾಗುತ್ತದೆ. ನಮ್ಮಲ್ಲಿಗೆ ಬಂದ ವಿದ್ಯಾರ್ಥಿಗಳು ನೂರು ಪ್ರತಿಶತ ತಮ್ಮ ಗುರಿಯನ್ನು ಸಾಧಿಸಬೇಕೆಂಬುದೇ ನಮ್ಮ ಕನಸು ಎನ್ನುವುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜ ಅವರ ಮಾತು.


ನೀಟ್ ರಿಪೀಟರ‍್ಸ್ ಬ್ಯಾಚ್‌ಗೆ ದಾಖಲಾತಿ ಹೊಂದುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವೂ ಲಭ್ಯವಿದೆ. ಬೆಂಗಳೂರು, ಮಂಗಳೂರಿನಂತಹ ನಗರ ಪ್ರದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ನೀಟ್ ಪರೀಕ್ಷಾ ತರಬೇತಿ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ದೊರಕುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಮೊದಲ ಪ್ರಯತ್ನದಲ್ಲಿ ವೈದ್ಯಕೀಯ ಶಿಕ್ಷಣದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಅಂಬಿಕಾದ ನೀಟ್ ರಿಪೀಟರ‍್ಸ್ ಬ್ಯಾಚ್ ವರದಾನವಾಗಿ ಪರಿಣಮಿಸಿದೆ.


ಹಲವು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷಾ ಯಶಸ್ಸು ಮೊದಲ ಪ್ರಯತ್ನದಲ್ಲಿ ದೊರಕದೇ ಇದ್ದಿರಬಹುದು. ಅಂತಹ ವಿದ್ಯಾರ್ಥಿಗಳು ಆತಂಕಿತರಾಗದೆ ನೀಟ್ ರಿಪೀಟರ‍್ಸ್ ಬ್ಯಾಚ್‌ನ ಪ್ರಯೋಜನ ಪಡೆದುಕೊಳ್ಳಬಹುದು. ಸತತ ಪ್ರಯತ್ನವೊಂದೇ ನೀಟ್ ಪರೀಕ್ಷೆಯ ಯಶಸ್ಸಿನ ಗುಟ್ಟು ಎಂಬುದನ್ನು ಮರೆಯಬಾರದು ಎನ್ನುತ್ತಾರೆ ಅಂಬಿಕಾ ವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಗತಿಗಳ ಸಂಯೋಜಕ ಕಿಶೋರ್ ಭಟ್.


ಈ ಬಾರಿಯ ನೀಟ್ ರಿಪೀಟರ‍್ಸ್ ಬ್ಯಾಚ್ ದಾಖಲಾತಿ ನಡೆಯುತ್ತಿದ್ದು ಹಲವಾರು ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಜುಲೈ ೩ರಿಂದ ತರಗತಿಗಳು ಆರಂಭಗೊಳ್ಳಲಿದ್ದು ಆಸಕ್ತರು 9482822800 / 9448835488 / 9741481600 ಸಂಖ್ಯೆಗೆ ಕರೆ ಮಾಡಬಹುದು.

ವಿಶೇಷ ರಿಯಾಯಿತಿ:
ಈ ಹಿಂದಿನ ನೀಟ್ ಪರೀಕ್ಷೆಯ ಅಂಕಗಳು ಹಾಗೂ ಪಿಯು ಪರೀಕ್ಷಾ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here