





ಉಪ್ಪಿನಂಗಡಿ: ಮಯೂರ ಮಿತ್ರ ವೃಂದ ಪುಳಿತ್ತಡಿ ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ವಿನೀತ್ ಅತ್ರೆಮಜಲು, ಕಾರ್ಯದರ್ಶಿಯಾಗಿ ಮಾಧವ ಕಂಪ ಆಯ್ಕೆಯಾಗಿದ್ದಾರೆ.


ಕೋಶಾಧಿಕಾರಿಯಾಗಿ ಶ್ರೀನಿವಾಸ ಬೊಳ್ಳಾವು, ಉಪಾಧ್ಯಕ್ಷರಾಗಿ ನಾಗೇಶ್ ಕಾರ್ನೋಜಿ, ಜೊತೆ ಕಾರ್ಯದರ್ಶಿಯಾಗಿ ವೀರಪ್ಪ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಪರಿಸರದ ನೂರಾರು ಸದಸ್ಯರನ್ನೊಳಗೊಂಡ ಮಯೂರ ಮಿತ್ರ ವೃಂದವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.












