ಕ್ಲಬ್‌ಗಳಲ್ಲಿ ಹಣವಿಟ್ಟು ಜೂಜಾಟ ನಿಷೇಧ, ಎಸ್ಪಿಯವರ ಸೂಚನೆ-ಪೊಲೀಸರಿಂದ ಪರಿಶೀಲನೆ

0

ಪುತ್ತೂರು: ಮಾನ್ಯತೆ ಪಡೆದಿರುವ ಕ್ಲಬ್‌ಗಳಲ್ಲಿ ಹಣ ಪಣಕ್ಕಿಟ್ಟು ಜೂಜಾಟ ನಡೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಪುತ್ತೂರಿನ ವಿವಿಧ ಕ್ಲಬ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಕ್ಲಬ್‌ಗಳು ಹಲವು ನಿಯಮಗಳನ್ನು ಪಾಲಿಸಿಕೊಂಡು ನಡೆಯುತ್ತಿವೆ.ಅಲ್ಲಿ ಕ್ಯಾರಂ, ಇಸ್ಪೀಟ್ ಆಟಗಳನ್ನು ಆಡಬಹುದು,ಆದರೆ ಯಾವುದೇ ಕಾರಣಕ್ಕೂ ಹಣ ಪಣವಾಗಿಟ್ಟು ಆಡುವಂತಿಲ್ಲ ಎಂಬ, ಎಸ್ಪಿಯವರ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕ್ಲಬ್‌ಗಳಿಗೆ ತೆರಳಿ ಸಿ.ಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here