ಪುತ್ತೂರು: ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಮಂತ್ರಿ ಮಂಡಲದ ರಚನೆ ನಡೆಯಿತು. ನಾಯಕಿಯಾಗಿ ಬೇಬಿ ಸನಿಹ ಹಾಗೂ ಉಪನಾಯಕಿಯಾಗಿ ಬೇಬಿ ಶಾರ್ವರಿ ಆಯ್ಕೆಯಾದರು. ವಿವಿಧ ಸಂಘಗಳ ನಾಯಕರನ್ನು ಆಯ್ಕೆ ಮಾಡಲಾಯಿತು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಹಿರಿಯ ಶಿಕ್ಷಕರು ನಾಯಕರುಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಾಲಾ ಸಂಚಾಲಕ ವಂ! ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಶುಭ ಹಾರೈಸಿ ಶಾಲು ಹೊದಿಸಿ, ಉತ್ತಮ ಶಾಲಾ ಕಾರ್ಯ ನಿರ್ವಹಿಸಲು ಹಾಗೂ ನಾಯಕತ್ವವನ್ನು ಸರಿಯಾಗಿ ನಿರ್ವಹಿಸಲು ತಿಳಿಸಿ ಹರಸಿದರು.
ಆಯ್ಕೆಯಾದ ಎಲ್ಲಾ ಸಂಘದ ನಾಯಕರುಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಾಯಕರು ಪ್ರತಿಜ್ಞಾ ಸ್ವೀಕಾರ ನಡೆಸಿದರು. ಹನಿಹ ಬಿ. ಅಂಚನ್ ಸ್ವಾಗತಿಸಿ ತೇಜಸ್ ವಂದಿಸಿದರು. ತ್ವಸ್ಥ ದೀಪ ಮತ್ತು ಸಾನಿಧ್ಯ ಕಾರ್ಯಕ್ರಮ ನಿರೂಪಿಸಿದರು.