





ನಿಡ್ಪಳ್ಳಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಶ್ರೀ ವಿಷ್ಣು ಮೂರ್ತಿ ದೇವಾಲಯ ಶ್ರೀ ಗೋಪಾಲ ಕ್ಷೇತ್ರ ಇರ್ದೆ ಇದರ ಜಂಟಿ ಆಶ್ರಯದಲ್ಲಿ ಪ್ರಗತಿಬಂಧು ಸ್ವ-ಸ್ವಹಾಯ ಸಂಘಗಳ ಒಕ್ಕೂಟ ದೂಮಡ್ಕ, ಪೇರಲ್ತಡ್ಕ, ಗುಮ್ಮಟೆಗದ್ದೆ , ಅಜ್ಜಿಕಲ್ಲು , ಅಜಲಡ್ಕ, ರೆಂಜ, ಕಕ್ಕೂರು, ಚೂರಿಪದವು ಇವುಗಳ ಸಹಕಾರದೊಂದಿಗೆ ರಾಧಾಕೃಷ್ಣ ಭಟ್ ಕಕ್ಕೂರು ಇವರ ಪೌರೋಹಿತ್ಯದಲ್ಲಿ 21ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಾಲಯದಲ್ಲಿ ಜೂ.29 ರಂದು ನಡೆಯಿತು.



ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಿ ಮಧ್ಯಾಹ್ನ ಮಹಾಪೂಜೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಯೋಜನೆಯ ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಸೋಹನ್.ಜಿ, ಪೂಜಾ ಸಮಿತಿ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು,ಸೇವಾ ಪ್ರತಿನಿಧಿಗಳು,ವಿಪತ್ತು ನಿರ್ವಹಣಾ ಸಮಿತಿ ಸದಸ್ಯರು ಪಾಲ್ಗೊಂಡರು.














