ಕಡಬ: ಮರ್ದಾಳ ಗುಡ್ ಶೆಪರ್ಡ್ ಪ್ರೌಢ ಶಾಲೆಯ 2025- 26ನೇ ಶೈಕ್ಷಣಿಕ ಸಾಲಿನ ಪ್ರಥಮ ಪೋಷಕರ ಸಭೆ ಜೂ.30ರಂದು ನಡೆಯಿತು.
ಮುಖ್ಯ ಅತಿಥಿ ಭಾರತೀಯ ಭೂಸೇನೆಯ ನಿವೃತ್ತ ಸೈನಿಕ, ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನದ ಶೈಕ್ಷಣಿಕ ಸಲಹೆಗಾರ ಮ್ಯಾಥ್ಯೂ ಅವರು ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಯಾವ ರೀತಿಯಾಗಿ ಇರಬೇಕು ಎಂಬುದನ್ನು ವಿವರಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಪ್ರಿಯಕುಮಾರಿ ಸಿ ಟಿ ಪ್ರಾಸ್ತವಿಕ ಮಾತುಗಳಾನ್ನಾಡಿದರು. ಪೋಷಕರ ಸಭೆಯಲ್ಲಿ 2024- 25 ನೇ ಶೈಕ್ಷಣಿಕ ಸಾಲಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ರೈ ಅವರನ್ನು ಸನ್ಮಾನಿಸಲಾಯಿತು. 2025- 26ನೇ ಶೈಕ್ಷಣಿಕ ಸಾಲಿನ ರಕ್ಷಕ- ಶಿಕ್ಷಕ ಸಂಘದ ಪದಾಧಿಕಾರಿಗಳ ನೇಮಕಾತಿ ಮಾಡಲಾಯಿತು. ಅಧ್ಯಕ್ಷರಾಗಿ ಅಲೆಕ್ಸಾಂಡರ್ ಸಿ ಎ ಹಾಗೂ ಉಪಾಧ್ಯಕ್ಷರಾಗಿ ಅಬ್ರಹಾಂ ಪಿ ವಿ ಮತ್ತು ಶಿಬಾ ಜಾರ್ಜ್ ನೇಮಕಗೊಂಡರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ತೋಮಸ್ ಪಿ ವಿ ವಹಿಸಿದರು .ಶಾಲಾ ಶೈಕ್ಷಣಿಕ ಸಲಹೆಗಾರರಾದ ಮೇಫಿ ಅವರು ಉಪಸ್ಥಿತರಿದ್ದರು.
ಶಿಕ್ಷಕಿ ರಶೀದಾ ಸಭೆಯ ವರದಿಯನ್ನು ವಾಚಿಸಿದರು .ಶಿಕ್ಷಕಿ ಹರಿಣಾಕ್ಷಿ ಅವರು ಸ್ವಾಗತಿಸಿ, ಶಿಕ್ಷಕಿ ನಯನಾರವರು ವಂದಿಸಿದರು .ಶಿಕ್ಷಕಿ ಶ್ರೀಲತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು.