ವಿಠಲ್ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿ | ಎಲ್. ಎನ್. ಕೂಡೂರು ರವರ ಪುಣ್ಯಸ್ಮರಣೆ

0

ವಿಟ್ಲ: ಇಲ್ಲಿನ ಬಸವನಗುಡಿ ಯಲ್ಲಿರುವ ವಿಠ್ಠಲ್ ಜೆಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಜೂ.30ರಂದು ದಿ | ಎಲ್. ಎನ್. ಕೂಡೂರು ರವರ ಸ್ಮರಣಾರ್ಥ ವಾಗಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಇದರ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿರವರು ಕೂಡೂರು ಅವರ ಜೊತೆಗಿನ ತಮ್ಮ ಒಡನಾಟ ವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮೋಹನ ಎ, ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಖಜಾಂಚಿ ಪ್ರಭಾಕರ ಶೆಟ್ಟಿ, ನಿರ್ದೇಶಕರುಗಳಾದ ಮೋನಪ್ಪ ಶೆಟ್ಟಿ, ಹಸನ್ ವಿಟ್ಲ, ಗೋಕುಲ್ ಶೇಟ್, ವಿಜಯ ಪಾಯಸ್, ಸಿರಿ ಎಲ್. ಎನ್. ಕೂಡೂರು ಮತ್ತು ಕುಟುಂಬದವರು, ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಎರಂಬು, ಪ್ರಾಂಶುಪಾಲ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿಶೆಣೈ ಮೊದಲಾದವರು ಉಪಸ್ಥಿತರಿದ್ದರು. ಝಕೀಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here