ವಿಟ್ಲ ನಗರ ಕಾಂಗ್ರೆಸ್ ಸಮಿತಿ ಸಹಭಾಗಿತ್ವದಲ್ಲಿ ಕಾಂಗ್ರೆಸ್ ಜನಜಾಗೃತಿ ಸಭೆ

0

ಬಿಜೆಪಿಗರು ಇತರರ ಮೇಲೆ ಆರೋಪ ಮಾಡುವ ಬದಲು ಅವರು ಭದ್ರವಾಗಲಿ: ಅಶೋಕ್‌ ಕುಮಾರ್ ರೈ

ವಿಟ್ಲ:ಬಿಜೆಪಿಯ  ಸುಳ್ಳಿನ ಸುರಿಮಳೆಗೆ ನಮ್ಮ ಉತ್ತರವಾಗಿದೆ. ನಾವು ಯಾವುದೇ ಕೆಲಸಕ್ಕೆ ಯಾರಲ್ಲಿಯೂ  ಹಣ ಪಡೆದುಕೊಂಡಿಲ್ಲ. ಜಾತಿ ಬೇಧ ನೋಡದೆ ಎಲ್ಲರಿಗೂ ಸೇವೆ ನೀಡುತ್ತಾ ಬಂದಿದ್ದೇವೆ.  ಜನ ಆಶೀರ್ವಾದ ಮಾಡಿದ್ದಾರೆ. ನಾವು ಭದ್ರರಾಗಿದ್ದೇವೆ. ಬಿಜೆಪಿಯಲ್ಲಿ ಇದ್ದವರೇ ಅವರೊಳಗೆ ಕತ್ತಿ‌ಮಸೆಯುವ ಕೆಲಸವಾಗುತ್ತಿದೆ. ಮೊದಲು ಬಿಜೆಪಿಗರು ಭದ್ರವಾಗುವುದನ್ನು ನೋಡಲಿ ಆ ಬಳಿಕ ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಹೇಳಿದರು. ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಟ್ಲ ನಗರ ಕಾಂಗ್ರೆಸ್ ಸಮಿತಿ ಸಹಭಾಗಿತ್ವದಲ್ಲಿ ವಿಟ್ಲ ಪೇಟೆಯಲ್ಲಿ ನಡೆದ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ನ ಉತ್ತರ ಜನಜಾಗೃತಿ ಸಬೆಯಲ್ಲಿ ಅವರು ಮಾತಮಾಡಿದರು. 

ಎಲ್ಲಾ ವಿಚಾರಗಳಲ್ಲೂ ಜನರಿಗೆ ಸ್ಪಂಧನೆ ಆಗುವ ಕೆಲಸ ಮಾಡುತ್ತಿದ್ದೇವೆ. ನನ್ನ ಲೆಟರಿಗೆ ಅಧಿಕಾರಿಗಳು ಬೆಲೆ ಕೊಡುತ್ತಾರೆ. ಯಾಕೆಂದರೆ ನಮಗೆ ಯಾವುದೇ ಮುಲಾಜಿಲ್ಲ. ನಾವು ಯಾರಲ್ಲಿಯೂ ದುಡ್ಡು ತೆಗೆದುಕೊಂಡಿಲ್ಲ. ನಾವು ಜನರ ಸೇವೆ ಮಾಡುವ ಜನಸೇವಕರು. ಆದ್ದರಿಂದ ಜನರ ಕೆಲಸಗಳಿಗೆ ಪ್ರಥಮ ಆದ್ಯತೆಯನ್ನು ನೀಡುತ್ತೇವೆ. ಆದ್ದರಿಂದ ಅಧಿಕಾರಿಗಳು ಅವರವರ ಕೆಲಸಗಳನ್ನು ನಿಯತ್ತಾಗಿ ಮಾಡಬೇಕಿದೆ. ಹಿಂದಿನ ಸರಕಾರ ಪ್ರತಿಯೊಂದು ಕೆಲಸಗಳಿಗೂ ಹಣ ಪಡೆದು ಇದೀಗ ಅದೇ ಅಭ್ಯಾಸವಾಗಿ ಹೋಗಿದೆ.‌ ಆರಂಭದಲ್ಲಿ ನನ್ನಲ್ಲಿಗೂ  ಕಟ್ಟು ಬಂದಿದೆ. ನಾನು ಅವರಿಗೆ ಎಚ್ಚರಿಕೆ ನೀಡಿ ಹಿಂದೆ ಕಳುಹಿಸಿದ್ದೇನೆ. ನಾವು ಯಾವುದೇ ಅಪೇಕ್ಷೆ ಪಟ್ಟವರಲ್ಲ. ನಮ್ಮ ಪಕ್ಷದವರಿಗೂ ಯಾವುದೇ ಹಣ ನೀಡಬೇಡಿ. ಬಿಜೆಪಿಗರು ತಾವು ಹಾಳಾಗುವುದರ ಜೊತೆಗೆ ಎಲ್ಲರನ್ನೂ ಹಾಳು ಮಾಡುವ ಕೆಲಸ  ಮಾಡುತ್ತಿದ್ದಾರೆ.  ಮೊನ್ನೆ ಮೊನ್ನೆ ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದೊಳಗೆ ಬಿಜೆಪಿಯವರು ಪಕ್ಷದ ಸಭೆ ನಡೆಸಿದ್ದರು, ಪರಿಣಾಮವಾಗಿ ಪಿಡಿಒ ಸಸ್ಪೆಂಡ್ ಆದ್ರು. ಇವರು ಮಾಡಿದ ಕೆಲಸಕ್ಕೆ ಅವರ ತಲೆದಂಡ ಆಗಿದೆ. ಬಿಜೆಪಿ ಪಕ್ಷ ಬಿಟ್ಟು ಯಾರಾದರೂ ಹೋದರೂ ಅವರ ಮನೆಗೆ ಈಡಿ ದಾಳಿ ನಡೆಸುವುದು, ಪೊಲೀಸರನ್ನು ಕಳಿಸಿ ಹೆದರಿಸೊದು ಬಿಜೆಪಿಯ ಒಂದು ಅಸ್ತ್ರವಾಗಿದೆ. ನಾನೂ ಕಾಂಗ್ರೆಸ್ ಗೆ ಬಂದಾಗ ನನ್ನ ಮನೆ, ಕಚೇರಿ, ಅಣ್ಣನ ಮನೆಗೆ ಈಡಿ ರೈಡ್ ಮಾಡಿಸಿದ್ದಾರೆ. ಆದರೆ  ಪ್ರಾಮಾಣಿಕತನದ ದುಡ್ಡು ನಮ್ಮಲ್ಲಿರುವುದು. ನಮ್ಮಲ್ಲಿ ಲಂಚದ ದುಡ್ಡಿಲ್ಲ ಎಂದರು.

ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 9/11 ಬಗ್ಗೆ ಬಿಜೆಪಿಗರು ಸುಳ್ಳು ಹೇಳಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಪಟ್ಟಿದ್ದೆ ಆದರೆ 9/11 ಬಗ್ಗೆ ಜನಸಾಮಾನ್ಯರಿಗೆ ತೊಂದರೆ ನೀಡಿದ್ದೆ ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರ,ಬಿಜೆಪಿ ಸರ್ಕಾರ ಯಾವುದೇ ಒಂದು ಬಡವರಿಗೆ ನಿವೇಶನ ನೀಡಿಲ್ಲ, ಕಾಂಗ್ರೆಸ್ ನೇತೃತ್ವದ ಸರ್ಕಾರದ ಇಂದಿರಾ ವಸತಿ ಯೋಜನೆಯನ್ನು ಪ್ರದಾನ ಮಂತ್ರಿ ಅವಾಸ್ ಎಂದು ಹೆಸರು ಬದಲಿಸಿದ್ದು ಮಾತ್ರ ಎಂದರು.

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಮ್  ಕೆ.ಬಿ. ರವರು ಮಾತನಾಡಿ, ಕಾಂಗ್ರೆಸ್ ನ  ಸುಳ್ಳು ಹೇಳುವುದೇ ಬಿಜೆಪಿಗರ ಕೆಲಸವಾಗಿದೆ. ಕಾಂಗ್ರೆಸ್ ಧರ್ಮ ರಾಜಕಾರಣ ಮಾಡುತ್ತಿದೆ.  ಸಮಾಜದಲ್ಲಿ ವಿಷ ಬೀಜ ಬಿತ್ತಿ ಅರಾಜಕತೆ ಸೃಷ್ಟಿಸುವ ಕೆಲಸ ಬಿಜೆಪಿಗರಿಂದ ಆಗುತ್ತಿದೆ. ನಮ್ಮ ಅಭಿವೃದ್ಧಿ ಕಂಡು ಸಹಿಸದೆ ಬಿಜೆಪಿಗರು ಅಪಪ್ರಚಾರಕ್ಕೆ ಮುಂದಾಗಿದ್ದಾರೆ.ಅಪಪ್ರಚಾರಕ್ಕೆ ಜನರು ಕಿವಿಕೊಡುವುದಿಲ್ಲ. ಪಂಚಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಜನರ ನಂಬಿಕೆಗೆ ಚ್ಯುತಿಬಾರದ‌ ರೀತಿಯಲ್ಲಿ ನುಡಿದಂತೆ ನಡೆಸಿದ್ದೇವೆ. ನಮ್ಮ ನಮ್ಮ ಊರುಗಳಲ್ಲಿ ಜನರಿಗೆ ಮನವರಿಕೆ ಮಾಡುವ ಕೆಲಸವಾಗಬೇಕು. ನಾವೆಲ್ಲರೂ ನಮ್ಮ ಸಿದ್ದಾಂತಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ.  ಪಕ್ಷ ಸಂಘಟನೆಯೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. 

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ  ಎಂ.ಎಸ್.ಮಹಮ್ಮದ್ ರವರು ಮಾತನಾಡಿ, ಇದೊಂದು ಪರಿಣಾಮಕಾರಿ ಕಾರ್ಯಕ್ರಮವಾಗಿದೆ. ಬಿಜೆಪಿಗರಿಗೆ ಸಾಮಾನ್ಯ ಜ್ಞಾನವಿಲ್ಲ. ಅಭಿವೃದ್ಧಿಯಲ್ಲಿ ದಾಖಲೆ ಬರೆದಿರುವ ಶಾಸಕರಿಂದ ಮಾದರಿ ಕಾರ್ಯಕ್ರಮ ಇದಾಗಿದೆ. ಬಿಜೆಪಿ ಪಕ್ಷ ಹುಟ್ಟಿರುವುದೇ ಸುಳ್ಳಿನಿಂದ. ಜನರಿಗೆ ಸಹಕಾರ ನೀಡುವ ಮನಸ್ಥಿತಿ ಬಿಜೆಪಿಗರಿಗಿಲ್ಲ ಎಂದರು.

ಡಿ.ಸಿ.ಸಿ.ಪ್ರದಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವರವರು ಮಾತನಾಡಿ,  ಪ್ರತೀ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಹಣಭಲ, ಅಪಪ್ರಚಾರದ ಮೂಲಕ ಅಧಿಕಾರಿ ಪಡೆಯುತ್ತಿರುವ ಕೆಲಸ ಬಿಜೆಪಿಯಿಂದ ಆಗುತ್ತಿದೆ.  ಹಲವಾರು ಹಿರಿಯ ನಿಷ್ಠಾವಂತ ಕಾರ್ಯಕರ್ತರಿಗೆ ಮುಜಗರ ಉಂಟಾಗುವ ಪರಿಸ್ಥಿತಿ ಇದೀಗ ಬಿಜೆಪಿ ಪಕ್ಷದೊಳಗೆ ಉಂಟಾಗಿದೆ ಎಂದರು.

 ಪಂಚ  ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆರವರು ಮಾತನಾಡಿ,  ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ  ಕಳೆದ ಹನ್ನೊಂನು ವರ್ಷಗಳಿಂದ ಬಿಜೆಪಿ ಸರ್ಕಾರ ಇದ್ದರು  ಬಿಜೆಪಿಯವರ ಪ್ರತಿಭಟನೆ ಹಾಸ್ಯಾಸ್ಪದ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನವನ್ನು ಸಹಿಸದೆ ದಿಗ್ಭ್ರಮೆಯಿಂದ ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದರು . 

 ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ‌ ವಿಟ್ಲ,  ಎಸ್. ಟಿ. ಘಟಕದ ಅಧ್ಯಕ್ಷರಾದ ಮಹಾಲಿಂಗ ಪುಣಚ,  ಜಿಲ್ಲಾ ಎಸ್.ಟಿ. ಘಟಕದ  ಉಪಾಧ್ಯಕ್ಷ ಕೇಶವ ನಾಯ್ಕ್,  ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಕೊಲ್ಯ, ಮಾಣಿಲ ಗ್ರಾ.ಪಂ. ಅಧ್ಯಕ್ಷರಾದ ಶ್ರೀದರ್ ಬಾಳೆಕಲ್ಲು,  ವಿಟ್ಲ ಮೆಸ್ಕಾಂ ಸಲಹಾ ಸಮಿತಿ ಅಧ್ಯಕ್ಷ  ಕರೀಂ ಕುದ್ದುಪದವು, ಪಟ್ಟಣ ಪಂಚಾಯತ್ ಸದಸ್ಯರಾದ ಹಸೈನಾರ್ ನೆಲ್ಲಿಗುಡ್ಡೆ, ವಿ.ಕೆ.ಎಂ.ಅಶ್ರಫ್, ಲತಾ ಅಶೋಕ್, ಪದ್ಮಿನಿ,‌ ಡೀಕಯ್ಯ, ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ,  ನಾಸಿರ್ ಕೋಲ್ಪೆ, ಅಳಿಕೆ ವಲಯಾಧ್ಯಕ್ಷ ಸೀತಾರಾಮ ಶೆಟ್ಟಿ, ಅಳಿಕೆ ಗ್ರಾ.ಪಂ.‌ಸದಸ್ಯ ಸದಾಶಿವ ಶೆಟ್ಟಿ, ಕಬಕ ವಲಯಾಧ್ಯಕ್ಷ ದಾಮೋದರ, ವಿಟ್ಲ ಬ್ಲಾಕ್ ಉಪಾಧ್ಯಕ್ಷರುಗಳಾದ ದಿನಕರ ಆಳ್ವಾ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಎಂ.ಕೆ.ಮೂಸ, ಜಯರಾಮ್ ಬಲ್ಲಾಳ್, ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷ ಅಬ್ಬು ನವಗ್ರಾಮ,  ಪ್ರಮುಖರಾದ ಜಾನ್ಸನ್‌ ವಿಟ್ಲ, ಶ್ರೀಧರ ಶೆಟ್ಟಿ ಪುಣಚ,  ಸುಧೀರ್ ಉಕ್ಕುಡ, ಶೇಕಾಲಿ ಶೇರಾಜೆ, ಹಂಝ ವಿಟ್ಲ, ಸಂತೋಷ್ ವಿಟ್ಲ ಮೊದಲಾವದರು ಉಪಸ್ಥಿತರಿದ್ದರು.

ರಿಕ್ಷಾ ಚಾಲಕರ ಮನವಿಗೆ ಶಾಸಕರ ಸ್ಪಂಧನೆ
ಕೆಲದಿನಗಳ ಹಿಂದೆ ವಿಟ್ಲ ಪೇಟೆಯಲ್ಲಿ ಟ್ರಾಪಿಕ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರು,‌ಮುಖ್ಯಾಧಿಕಾರಿ‌ ಹಾಗೂ  ಪೊಲೀಸರ ಸಭೆ ನಡೆಸಿ ಕಂಬಳಬೆಟ್ಟು ಕಡೆ ತೆರಳುವ ಆಟೋ ರಿಕ್ಷಾ ಗಳನ್ನು ಸಂತೆ ತೆರಳುವ  ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲು ಸೂಚಿಸಲಾಗಿತ್ತು. ಇದು ಆಟೋ ಚಾಲಕರ ಅಸಮದಾನಕ್ಕೆ ಕಾರಣವಾಗಿತ್ತು. ಜೂ.30ರಂದು ವಿಟ್ಲದಲ್ಲಿ ನಡೆದ ಜನಜಾಗೃತಿ ಸಭೆಗೆ  ಶಾಸಕರು ಬಂದ ವೇಳೆ ಅಲ್ಲಿಗೆ ಆಗಮಿಸಿ ಆಟೋ ಚಾಲಕರು ತಮ್ಮ ಅಳಲನ್ನು ಅವರಲ್ಲಿ ತಿಳಿಸಿದ್ದರು ಮಾತ್ರವಲ್ಲದೆ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಮನವಿ ಮಾಡಿದ್ದರು. ಕೂಡಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕರು‌ ಟ್ರಾಫಿಕ್ ಸಮಸ್ಯೆಯಾಗದಂತೆ 4 ಆಟೋ ರಿಕ್ಷಾವನ್ನು ನಿಲ್ಲಿಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

LEAVE A REPLY

Please enter your comment!
Please enter your name here