ಗಣೇಶೋತ್ಸವ ಆಚರಿಸಲು ವಿದ್ಯಾರ್ಥಿ ಹಾಗೂ ಹಿರಿಯ ವಿದ್ಯಾರ್ಥಿ ಮಿತ್ರರ ತಂಡ ಸಜ್ಜು
ಪುತ್ತೂರು: ಸಂತ ಫಿಲೋಮಿನಾ ವಿದ್ಯಾಸಂಸ್ಥೆ, ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ 43ರ ಸಂಭ್ರಮ. ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್, ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಉತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆಯುವ ಶ್ರೀ ಗಣೇಶೋತ್ಸವ ವಿಗ್ರಹ ಮುಹೂರ್ತವು ಜೂ.30 ರಂದು ಪರ್ಲಡ್ಕ ಏಕದಂತ ವಠಾರದಲ್ಲಿ ನಡೆಯಿತು.

ಗಣಪನ ವಿಗ್ರಹ ರಚನೆಕಾರರಾದ ತಾರಾನಾಥ ಆಚಾರ್ಯ ಹಾಗೂ ಮನೋಜ್ಞ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದು ಶ್ರೀ ಗಣೇಶೋತ್ಸವಕ್ಕೆ ಅದ್ದೂರಿ ಚಾಲನೆ ದೊರಕಿತು. ಈ ವರ್ಷವೂ ಭಕ್ತಿ ಭಾವನೆ, ಸಂಸ್ಕೃತಿಯ ಸನ್ನಿವೇಶದಲ್ಲಿ ಅದ್ದೂರಿಯಾಗಿ ಶ್ರೀ ಗಣೇಶೋತ್ಸವ ಆಚರಿಸಲು ವಿದ್ಯಾರ್ಥಿ ಹಾಗೂ ಹಿರಿಯ ವಿದ್ಯಾರ್ಥಿ ಮಿತ್ರರ ತಂಡ ಸಜ್ಜಾಗಿದೆ. ಪುತ್ತೂರಿನ ಸಮಸ್ತ ನಾಗರಿಕರ ಆಶೀರ್ವಾದ, ಸಹಕಾರ ಈ ಉತ್ಸವದ ಶಕ್ತಿಯಾಗಿದೆ. ವಿಗ್ರಹ ಮುಹೂರ್ತ ಸಂಭ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ದುರ್ಗಾಪ್ರಸಾದ್ ಅಲ್ಲದೆ ವಿದ್ಯಾರ್ಥಿ ಮಿತ್ರರಾದ ಅನ್ವೇಶ್ ರೈ, ಸೂರಜ್ ನಂದ, ರಚಿತಾ, ಸೃಜನ, ವರ್ಷಾ, ಮನ್ವಿತ, ದಿಯಾ, ಪ್ರಥ್ವಿ, ಮಧುರಾ, ಸುಧೀಂದ್ರ, ಧನುಷ್, ಆಕಾಶ್, ಮೋಕ್ಷಿತಾ, ಆಕರ್ಷ್, ಅಭಿರಾಮ, ಸೃಜನ್, ನಿಖಿಲ್‌ರಾಮ, ರಂಜಿತ್, ಕೀರ್ತನ, ಅಭಿಜಿತ್, ಲತಿನ್, ಕ್ರಿಶಲ್, ಹವ್ಯಾಸ್, ಸುಜನ್, ಕಾರ್ತಿಕ್, ಆದಿತ್ಯ, ಗೌರಿಶ್, ಆಕಾಶ್ ರೈ, ಆಕಾಶ್ ನಾಯಕ್, ದಿಶಾಂತ್, ಸುಹಾನ, ಕೌಶಲ್, ಲಿಖಿತ್, ಭವಿತ್ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಸುಕುಮಾರ ಪರ್ಲಡ್ಕ, ಪ್ರಜ್ವಲ್ ಮುಕ್ರಂಪಾಡಿ, ಆಶ್ಲೇಶ್, ಋತೀಂದ್ರ, ವಿಕ್ರಂ ಆಳ್ವ, ಸುಮಂತ್, ಅನುಶ್, ಹರ್ಷಾ ಮತ್ತೀತರರು ಉಪಸ್ಥಿತರಿದ್ದರು.