ಮದುವೆಯಾಗುವುದಾಗಿ‌ ನಂಬಿಸಿ ವಂಚನೆ ಪ್ರಕರಣ

0

ನ್ಯಾಯ ಯಾರಿಗೆ‌ ಸಿಗಬೇಕೋ‌ ಅವರ ಜೊತೆ ನಾವಿದ್ದೇವೆ- ಮುರಳಿಕೃಷ್ಣ ಹಸಂತಡ್ಕ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಬಿಜೆಪಿ ನಗರಸಭಾ ಸದಸ್ಯರ ಪುತ್ರನಿಂದ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ ಪ್ರತಿಕ್ರಿಯಿಸಿದ್ದಾರೆ.

ಸಂತ್ರಸ್ತೆಯ ತಾಯಿ ನಮ್ಮ ಬಳಿಗೆ ಬಂದು‌ ನ್ಯಾಯ‌ ತೆಗೆಸಿಕೊಡಬೇಕು‌ ಎಂದಿದ್ದರು. ಮಗ ಒಪ್ಪುತ್ತಿಲ್ಲ, ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇನೆ ಎಂದು ಜಗನ್ನಿವಾಸ್ ರಾವ್ ಹೇಳಿದ್ದರು. ದುಡ್ಡು‌ ಕೊಟ್ಟಾದರೂ ಮುಗಿಸಿದರೆ ಸಾಕು ಎಂದು‌ ಅವರು ನನ್ನ ಬಳಿ ಹೇಳಿದ್ದರು. ನಾವು ಯಾಕೆ ಸುಮ್ಮನಿದ್ದೆವು ಎಂದರೆ ಇದು ಎರಡು ಕುಟುಂಬದ ವ್ಯವಸ್ಥೆ, ಯಾವುದೇ ವಿಚಾರಗಳ ಬಗ್ಗೆ ಅಡಗಿ ಕುಳಿತುಕೊಳ್ಳುವವರು ನಾವಲ್ಲ., ಕಾಡ್ಗಿಚ್ಚಿನಲ್ಲಿ ಬೇಳೆ ‌ಬೇಯಿಸಿಕೊಳ್ಳುವವರು ನಾವಲ್ಲ., ಸಂಘಟನೆಯಲ್ಲಿ ಇಂತಹ‌ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದರು.

ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ನಮ್ಮ‌ ಸಂಘಟನೆಯವರು ಶ್ರಮಿಸಿದ್ದಾರೆ. ನ್ಯಾಯ ಯಾರಿಗೆ‌ ಸಿಗಬೇಕೋ‌ ಅವರ ಜೊತೆಗೆ ಯಾವತ್ತಿಗೂ ನಾವಿದ್ದೇವೆ ಎಂದವರು ಹೇಳಿದರು.

LEAVE A REPLY

Please enter your comment!
Please enter your name here