ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಗಸ್ಟ್ 27 ಮತ್ತು 28 ರಂದು ಜರಗಲಿರುವ 40 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಹಾಗೂ ಸಮಾಲೋಚನಾ ಸಭೆಯು ಜೂ. 29 ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು, ದೇವಾಲಯದ ಅರ್ಚಕ ನಾರಾಯಣ ಭಟ್ ರವರು ಪ್ರಾರ್ಥಿಸಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಅಧ್ಯಕ್ಷ ಶರತ್ ಕುಮಾರ್ ಪಾರ, ಸಂಚಾಲಕ ಡಾ. ಸುಬ್ರಹ್ಮಣ್ಯ ವಾಗ್ಲೆ, ಕೋಶಾಧಿಕಾರಿ ಉಚಿತ್ ಕುಮಾರ್ ಬದಿನಾರು, ಮಾಜಿ ಅಧ್ಯಕ್ಷರುಗಳಾದ ಸೀತಾರಾಮ ಗೌಡ ಮಿತ್ತಡ್ಕ, ಶೇಷಪ್ಪ ರೈ ಮೂರ್ಕಾಜೆ, ಸತೀಶ್ ಕುಮಾರ್ ರೈ ಮೂರ್ಕಾಜೆ, ಸತೀಶ್ ಗೌಡ ಪಾರ, ಹರಿಪ್ರಸಾದ್ ಬೆಟ್ಟಂಪಾಡಿ, ಧನಂಜಯ ರೆಂಜ, ಉಮೇಶ್ ಮಿತ್ತಡ್ಕ, ಜತ್ತಪ್ಪ ಗೌಡ ಬಳ್ಳಿತ್ತಡ್ಡ, ಶೀನಪ್ಪ ಪೂಜಾರಿ, ಶಿವಪ್ರಸಾದ್ ತಲೆಪ್ಪಾಡಿ, ರವಿರಾಜ್ ಅಮೀನ್ ಬೆದ್ರಾಡಿ, ಪ್ರವೀಣ್ ಕರ್ನಪ್ಪಾಡಿ, ಉದಯ ಕುಮಾರ್ ಕಕ್ಕೂರು, ನಾಗರಾಜ್ ಕಜೆ, ರಾಧಾಕೃಷ್ಣ ಬಳ್ಳಿತ್ತಡ್ಡ, ಶೇಷನ್ ಪಾರ, ಹರೀಶ್ ಕಲ್ಲಗದ್ದೆ, ಅಕ್ಷಯ್, ಶಿವಗಿರಿ ಸೌಂಡ್ಸ್ ನ ಮಹಾಲಿಂಗ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕಡೆ ಆಮಂತ್ರಣ ಪತ್ರ ವಿತರಣೆಯ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ಹಂಚಲಾಯಿತು.
ಅಧ್ಯಕ್ಷ ಶರತ್ ಕುಮಾರ್ ಪಾರ ಸ್ವಾಗತಿಸಿ, ಕೋಶಾಧಿಕಾರಿ ಉಚಿತ್ ಕುಮಾರ್ ವಂದಿಸಿದರು.