ಪುತ್ತೂರು: ತುಕಾರಾಮ ಬಾಯಾರು ನಿರ್ದೇಶನದ “918” ಎಂಬ ಕನ್ನಡ ಕಿರುಚಿತ್ರವು ಜು.28 ರಂದು ಬೆಳಿಗ್ಗೆ 11:30ಕ್ಕೆ ಬ್ರಹ್ಮ ಪ್ರೋಡಕ್ಷನ್ ಯುಟ್ಯೂಬ್ ಚಾನೆಲ್, V4 ಚಾನೆಲ್ ಮಂಗಳೂರು, ಹಾಗೂ ಉಡುಪಿ ಸ್ಪಂದನ ಟಿವಿ ವಾಹಿನಿಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಇದರ ಮರುಪ್ರಸಾರ ರಾಜ್ಯದ ಕೆಲವು ವಾಹಿನಿಗಳಲ್ಲಿ ಪ್ರಸಾರವಾಗಲಿದೆ. ಉದಯ್ ಕುಮಾರ್ ಆಚಾರ್ಯ ಬಾಯಾರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ನಾಯಕ ನಟರಾಗಿ ಸಂದೇಶ್ ಆಚಾರ್ಯ, ನಾಯಕಿ ಕವಿತಾ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಗಿರೀಶ್ ಆಚಾರ್ಯ ಉಡುಪಿ, ಸೂರಜ್ ಆಚಾರ್ಯ ಉಡುಪಿ, ಗುರುಪ್ರಕಾಶ್ ಆಚಾರ್ಯ ಹೊಸನಗರ, ವೈಷ್ಣವಿ ವೈ ಅಮೀನ್ ಮಣಿಪಾಲ, ವೈಷ್ಣವಿ ಖಾರ್ವಿ ಮುಂತಾದವರು ಅಭಿನಯಿಸಿದ ಈ ಚಿತ್ರದ ಸಂಗೀತ ಪ್ರಾಜ್ಞೇಶ್ ಕುಂದಾಪುರ, ಛಾಯಾಗ್ರಹಣ ಸತೀಶ್ ಬಿ ಆಚಾರ್ಯ, ಸಂಕಲನ ಸಂದೇಶ್ ಆಚಾರ್ಯ, ಪೋಸ್ಟರ್ ಡಿಸೈನ್ ಸಂಜಯ್ ರಘುರಾಮ ಶೆಟ್ಟಿ ಸಹಕರಿಸಿದ್ದಾರೆ.