ರಾಮಕುಂಜ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹಳೆನೇರೆಂಕಿ-ರಾಮಕುಂಜ ಇದರ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆಯಾಗಿ ಹೇಮಾವತಿ ಜೆ.ಪೂಜಾರಿ ಹಲ್ಯಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಸಂತಿ ಕನೆಮಾರು ಆಯ್ಕೆಯಾಗಿದ್ದಾರೆ.

ಜೂ.27ರಂದು ರಾಮಕುಂಜ ಗ್ರಾ.ಪಂ.ಸಭಾಭವನದಲ್ಲಿ ನಡೆದ ಸಭೆಯಲ್ಲಿ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಗೆ ನೂತನ ಸಮಿತಿ ರಚನೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸವಿತ, ಜೊತೆ ಕಾರ್ಯದರ್ಶಿಯಾಗಿ ಲೀಲಾವತಿ ಪಿ.ಟಿ., ಕೋಶಾಧಿಕಾರಿಯಾಗಿ ವಿಮಲಹರೀಶ್ ಅವರನ್ನು ಆಯ್ಕೆ ಮಾಡಲಾಯಿತು. ಆ.8ರಂದು ನಡೆಯುವ ವರಮಹಾಲಕ್ಷ್ಮೀ ಪೂಜೆ ಕುರಿತಂತೆ ಚರ್ಚೆ ನಡೆಸಿ ಜವಾಬ್ದಾರಿ ಹಂಚಲಾಯಿತು.