ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ CET/NEET ತರಬೇತಿಯನ್ನು ಸಂಸ್ಥೆಯ ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ ಉದ್ಘಾಟಿಸಿ, ಬಳಿಕ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಈ ಸ್ಪರ್ಧಾತ್ಮಕ ಯುಗದಲ್ಲಿ ಹಳ್ಳಿಯ ಮಕ್ಕಳು ಕೂಡಾ CET/NEET ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆಯಲಿ ಎಂಬ ಉದ್ಧೇಶದಿಂದ’, CET/NEET ತರಬೇತಿಯನ್ನು ಪ್ರಾರಂಭಿಸಿದ್ದೇವೆ ಎಂದು ನುಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರುತ ಅಕಾಡೆಮಿ ಮಂಗಳೂರು ಇದರ ನಿರ್ದೇಶಕರಾದ ಡಾ. ಶ್ರುತಕೀರ್ತಿರಾಜ ಎಸ್ ಬಿ ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಯಿಂದ ಗುರಿ ಮುಟ್ಟಲು ಸಾಧ್ಯ, ಮತ್ತು ವೃತ್ತಿಪರ ಕೋರ್ಸ್ಗಳಿಗೆ CET/NEET ನಲ್ಲಿ ಉತ್ತಮ ರ್ಯಾಂಕ್ಗಳನ್ನು ಪಡೆದರೆ ಉತ್ತಮ ಕಾಲೇಜುಗಳಲ್ಲಿ ಸೀಟ್ ಸಿಗಲು ಸಾಧ್ಯ ಎಂದು ತಿಳಿಸಿಕೊಟ್ಟರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಯವರು ಕಾಲೇಜಿನಲ್ಲಿ ಸಿಗುವ CET/NEET ನ ತರಬೇತಿಯನ್ನು ಸದುಪಯೋಗಮಾಡಿಕೊಳ್ಳಿ ಎಂದು ತಿಳಿಸಿದರು.
ಶ್ರುತ ಅಕಾಡೆಮಿ ಮಂಗಳೂರು ಇದರ ನೇತೃತ್ವದಲ್ಲಿ ನಮ್ಮ ಸಂಸ್ಥೆಯಲ್ಲಿ CET/NEET ತರಬೇತಿಯು ಇನ್ನು ಮುಂದೆ ನಿರಂತರ ನಡೆಯಲಿದೆ.

ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿಯ ಫಾತಿಮತ್ ಶಬೀಬ ನಿರೂಪಣೆಗೈದು, ಸಂವಿಧಾನದ ಪೀಠಿಕೆಯನ್ನು ದ್ವಿತೀಯ ಪಿಯುಸಿಯ ಶಮ ಕೆ ವಾಚಿಸಿ, ವಿದಿಶಾ ಬಿ ಕೆ ಮತ್ತು ಬಳಗ ಪ್ರಾರ್ಥನೆಯನ್ನು ಸಲ್ಲಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೀರಕ್ಷ ಪಿ ಸ್ವಾಗತಿಸಿ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಸಮೀಕ್ಷಾ ಸಿ ಎಸ್ ವಂದನಾರ್ಪಣೆಗೈದರು. ಜೀವಶಾಸ್ತ್ರ ಉಪನ್ಯಾಸಕಿ ಕಸ್ತೂರಿ ಕೆ ಜಿ ಕಾರ್ಯಕ್ರಮಕ್ಕೆ ಸಹಕರಿಸಿದರು.