





ಕಾಣಿಯೂರು: ಸುಳ್ಯ ಬಿಜೆಪಿ ಮಂಡಲದ ದೋಳ್ಪಾಡಿ ಬಿಜೆಪಿ ಬೂತ್ ಸಂಖ್ಯೆ 83ರಲ್ಲಿ ಗುರುಪೂರ್ಣಿಮೆ ಆಚರಣೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು, ನಿವೃತ್ತ ಶಿಕ್ಷಕರಾದ ಅಚ್ಯುತ್ತ ಗೌಡ ಕೂರೇಲುರವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಜನಾರ್ದನ ದೋಳ್ಪಾಡಿ, ಕಾರ್ಯದರ್ಶಿ ಭವಿತ್ ಕೂರೇಲು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕ ದಿವಾಕರ ಮರಕ್ಕಡ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕಯ್ಯ ಪರವ, ದೇವಿಪ್ರಸಾದ್ ದೋಳ್ಪಾಡಿ, ಕುಶಾಲಪ್ಪ ಕೂರೇಲು, ಯಶೋಧರ ಕೂರೇಲು ಮತ್ತಿತರರು ಉಪಸ್ಥಿತರಿದ್ದರು.















