ಆಲಂಕಾರು : ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಕೊಯಿಲ ಮಹಾ ಶಕ್ತಿ ಕೇಂದ್ರದ ರಾಮಕುಂಜ ಶಕ್ತಿಕೇಂದ್ರದ ಬೂತ್ ಸಂಖ್ಯೆ 9ಇದರ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಸುಸಂಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆಯನ್ನು ನೀಡಿ ಸಮಾಜದಲ್ಲಿ ಉನ್ನತ ಗೌರವವನ್ನು ಸಂಪಾದಿಸಿ, ಲೇಖಕರಾಗಿ ಜನಮಾನಸದಲ್ಲಿ ಹೆಸರುವಾಸಿಯಾದ ಹಿರಿಯರಾದ ರಾಪ್ಟ್ರ ಪ್ರಶಸ್ತಿ ವಿಜೇತರಾದ ನಿವೃತ್ತ ಮುಖ್ಯ ಗುರುಗಳಾದ ರಾಮಕುಂಜ ಗ್ರಾಮದ ಸಂಪ್ಯಾಡಿ ತೋಟ ನಾರಾಯಣ ಭಟ್ಟ್.ಟಿ ಮತ್ತು ಸಂಧ್ಯಾ ದಂಪತಿಗಳನ್ನು ಅವರ ಮನೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ನಂತರ ಅವರು ಆಶ್ರೀರ್ವಾದಿಸಿ ತಾನು ಬರೆದ ಮೋದಿಗೆ ಮೋದಿಯೇ ಸಾಟಿ, ಶ್ರೀ ವಿಶ್ವೇಶ ತೀರ್ಥರ ಬಹುಮಖಿ ವ್ಯಕ್ತಿತ್ವ, ಭಾರತೀಯ ವಿವಾಹ ಪಾವಿತ್ರ್ಯತೆ ಪುಸ್ತಕವನ್ನು ಉಚಿತವಾಗಿ ವಿತರಿಸಿದರು.

ಈ ಸಂಧರ್ಭದಲ್ಲಿ ಬಿ.ಜೆ.ಪಿ ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ್ ಗಾಂಧಿಪೇಟೆ, ಪ್ರಮುಖರಾದ ಪೂವಪ್ಪ ಗೌಡ ಸಂಪ್ಯಾಡಿ, ಸದಾಶಿವ ಶೆಟ್ಟಿ ಮಾರಂಗ, ಉಮೇಶ ಕಲ್ಲೇರಿ, ಬಾಲಕೃಷ್ಣ ಗೌಡ ಪಟ್ಟೆ ಸಂಪ್ಯಾಡಿ, ಕೇಶವ ಗಾಣಂತಿ, ಜಯಕರ ಪೂಜಾರಿ ಕೊಂಡ್ಯಾಡಿ, ಸಂಜೀವ ಪೂಜಾರಿ ಕೊಂಡ್ಯಾಡಿ, ರಾಮಚಂದ್ರ ದೇವಾಡಿಗ ಊಂತಿಲ, ಮೋನಪ್ಪ ಗೌಡ ಸಂಪ್ಯಾಡಿ, ಹರೀಶ ಹೊಸಮಣ್ಣು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.