ಪಾಣಾಜೆ: ಅರ್ಲಪದವಿನ 30ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಾಬು ರೈ ಕೋಟೆ ಇವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ಜು.11 ರಂದು ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ .ಜಿ ಶಂಕರನಾರಾಯಣ ಭಟ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀಪ್ರಸಾದ್ ಪಾಣಾಜೆ, ಪ್ರಗತಿಪರ ಕೃಷಿಕರಾದ ಗೋವಿಂದ ಭಟ್ ಕಡಂದೇಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ದೇವಸ್ಯ, ಸದಸ್ಯರಾದ ನಾರಾಯಣ ನಾಯಕ್, ವಿಮಲಾ ಅರ್ಧಮೂಲೆ, ಸುಲೋಚನಾ ಕೀಲಂಪಾಡಿ, ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಸತ್ಯನಾರಾಯಣ ಶರ್ಮ, ಜಾಣು ನಾಯ್ಕ ಭರಣ್ಯ, ವಸಂತ ಕುರೂಪ್ ಭರಣ್ಯ, ಕಾರ್ಯದರ್ಶಿ ಪ್ರೀತಮ್ ರೈ ದೇವಸ್ಯ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಕುಲಾಲ್ ಹಾಗೂ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೋಲ್ವಾಲ್ಕರ್, ಕೋಶಾಧಿಕಾರಿ ಕರುಣಾಕರ ಕುಲಾಲ್, ಸ್ವಾಗತ ಸಮಿತಿಯ ಸಹಸಂಚಾಲಕ ಸರಸ್ವತಿ ಗುವೆಲುಗದ್ದೆ, ಸಾಂಸ್ಕೃತಿಕ ಸಮಿತಿಯ ಸಹ ಸಂಚಾಲಕ ಅನುರಾಧ ಕೊಂದಲಡ್ಕ, ಪ್ರಚಾರ ಸಮಿತಿಯ ಸಂಚಾಲಕ ಪ್ರೀತೇಶ್ ವಾಣಿಯನ್, ಸಹ ಸಂಚಾಲಕ ಜಿ .ಎಸ್ ಹರೀಶ್ ಹಾಗೂ ಎಲ್ಲಾ ಸಮಿತಿಯ ಸದಸ್ಯರುಗಳಾದ ರಾಮ ಮಲೆಕುಡಿಯ,ಚನಿಯ ನಾಯ್ಕ, ಸುಮಿತ್ರ, ಉದಯ ಸುಡುಕುಳಿ, ಮಾಧವ ಮಣಿಯಾಣಿ, ಜಯರಾಮ ಆಳ್ವ, ಕಾರ್ತಿಕ್, ಶ್ರೀಹರಿ ಜಿ, ಸುಶಾಂತ್, ಸದಾನಂದ, ಸತೀಶ್, ಕಮಲ, ಸುಂದರಿ ಎನ್, ಸೀತಾ, ಶಾರದಾ, ಸುಂದರಿ, ಸುಜಾತ, ಜಯಪ್ರಸಾದ್ ರೈ, ಮಹೇಶ್ ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಸ್ವಾಗತಿಸಿ, ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಆರ್ಲಪದವು ವಂದಿಸಿದರು.