- ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ಅಧ್ಯಕ್ಷರಾಗಿ ರಶ್ಮಿ ನಿರಂಜನ ರೈ ಮಠಂತಬೆಟ್ಟು, ಕಾರ್ಯದರ್ಶಿಯಾಗಿ ಪವಿತ್ರ ಸುರೇಶ್ ಶೆಟ್ಟಿ ಬರಮೇಲು ಮತ್ತು ಗೌರಾವಾಧ್ಯಕ್ಷರಾಗಿ ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಪುನರಾಯ್ಕೆಯಾಗಿದ್ದಾರೆ. ಕೋಡಿಂಬಾಡಿ ಗ್ರಂಥಾಲಯದಲ್ಲಿ ನಡೆದ ವನಿತಾ ಸಮಾಜದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ಉಪಾಧ್ಯಕ್ಷರಾಗಿ ಸುಲೋಚನಾ ಸೇಡಿಯಾಪು, ಜೊತೆ ಕಾರ್ಯದರ್ಶಿಯಾಗಿ ಸೌಮ್ಯ ಶಿವಪ್ರಕಾಶ್ ಮೋನಡ್ಕ, ಕೋಶಾಧಿಕಾರಿಯಾಗಿ ಯಶೋದ ಬಾಲಕೃಷ್ಣ ಗೌಡ ಕಾಪು, ಲೆಕ್ಕ ಪರಿಶೋಧಕರಾಗಿ ಭವ್ಯ ಡೆಕ್ಕಾಜೆ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರದ್ಧಾ ಸುದೇಶ್ ಶೆಟ್ಟಿ ಶಾಂತಿನಗರ, ಸವಿತಾ ಚಿದಾನಂದ ರೈ, ಸ್ವಾತಿ ದರ್ಖಾಸ್, ಗೌರವ ಸಲಹೆಗಾರರಾಗಿ ರಾಧಿಕಾ ರಮೇಶ್ ಸಾಮಂತ್ ನೆಕ್ಕರಾಜೆ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ ಮತ್ತು ಧರ್ಮಾವತಿ ಸೇಡಿಯಾಪು ಅವರನ್ನು ಆಯ್ಕೆ ಮಾಡಲಾಯಿತು.
ಜು.27ರಂದು ಆಟಿದ ಕೂಟ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತಿರ್ಮಾನಿಸಲಾಯಿತು. ರಶ್ಮಿ ನಿರಂಜನ ರೈ ಸ್ವಾಗತಿಸಿ ಪವಿತ್ರ ಸುರೇಶ್ ಶೆಟ್ಟಿ ವಂದಿಸಿದರು. ಪೂರ್ಣಿಮಾ ಎಸ್. ಶೆಟ್ಟಿ ಪ್ರಾರ್ಥಿಸಿದರು.
