ಪುತ್ತೂರು: ಇಲ್ಲಿನ ಯಂ. ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಆರಂಭಗೊಂಡ ಆಷಾಢ ಸೇಲ್ಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಜು.12ರಂದು ಸಂಜೆ ಗ್ರಾಹಕರ ಜನಸಂದಣಿ ತಾಳಲಾರದೆ ಶಟರ್ ಎಳೆದು ಹಂತ ಹಂತವಾಗಿ ಗ್ರಾಹಕರನ್ನು ಒಳಗೆ ಬಿಡುತ್ತಿರುವುದು ಕಂಡು ಬಂದಿದೆ.
ಇಲ್ಲಿನ ಮುಖ್ಯರಸ್ತೆಯಲ್ಲಿರುವ ಯಂ. ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ, ಪುತ್ತೂರಿನವರೊಂದಿಗೆ ಹತ್ತೂರಿನವರೂ ಕಾತರದೊಂದಿಗೆ ಕಾಯುತ್ತಿರುವ, ಪ್ರಖ್ಯಾತ ಮಿಲ್ಗಳಿಂದ ನೇರವಾಗಿ ಖರೀದಿಸಿ ಅತೀ ಕಡಿಮೆ ಲಾಭಾಂಶವಿಟ್ಟು ಮಿತ ದರದಲ್ಲಿ ಮಾರಾಟ ಮಾಡುವ ಕಂಪೆನಿ ಸೀರೆಗಳು ಮತ್ತು ಇನ್ನಿತರ ಜವುಳಿಗಳ ಆಷಾಢ ಸೇಲ್ ಜು.೭ರಿಂದ ಆರಂಭಗೊಂಡಿತ್ತು. ಆರಂಭದ ದಿನದಿಂದಲೇ ಗ್ರಾಹಕರು ಮಳಿಗೆಗೆ ಧಾವಿಸಿ ಬರುತ್ತಿದ್ದು ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಊರ, ಪರವೂರ ಗ್ರಾಹಕರಿಂದ ಮಳಿಗೆಯು ತುಂಬಿತುಳುಕುತ್ತಿದೆ. ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ, ಇನ್ನಿತರ ಜವುಳಿಗಳನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನವೂ ಹೊಸ ಹೊಸ ಸ್ಟಾಕ್ಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವುದು ಮತ್ತು ಕಡಿಮ ಲಾಭಾಂಶದೊಂದಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದು ಆಷಾಡ ಸೇಲ್ನ ವಿಶೇಷತೆಯಾಗಿದೆ.



ಜು.12ರಂದು 2ನೇ ಶನಿವಾರ ಸರಕಾರ ರಜೆಯಾದ ಕಾರಣ ಗ್ರಾಹಕರು ಮಳಿಗೆಗೆ ಧಾವಿಸಿ ಬರುತ್ತಿದ್ದು, ಭರ್ಜರಿ ಖರೀದಿಯಲ್ಲಿ ತೊಡಗಿಸುತ್ತಿದ್ದಾರೆ. ಸಂಜೆಯಾಗುತ್ತಲೇ ಗ್ರಾಹಕರ ಸಂದಣಿ ಹೆಚ್ಚಾಗಿ ಮಳಿಗೆಯಲ್ಲಿ ಗ್ರಾಹಕರನ್ನು ನಿಯಂತ್ರಿಸಲಾಗದೆ ಕೊನೆಗೆ ಮಳಿಗೆಯ ಶಟರ್ ಎಳೆದರು. ಆದರೂ ಹೊರಗಡೆ ಗ್ರಾಹಕರು ಮೆಟ್ಟಿಲಿನಲ್ಲಿ ಕಾಯುತ್ತಿದ್ದರು. ಗ್ರಾಹಕರನ್ನು ಹಂತ ಹಂತವಾಗಿ ಮಳಿಗೆಯ ಒಳಗೆ ಬಿಡುತ್ತಿದ್ದದ್ದು ಕಂಡು ಬಂದಿದೆ.

