ಆಳ್ವಫಾರ್ಮ್ಸ್‌ನಲ್ಲಿ‌ ಕುಟುಂಬ ಸಮ್ಮಿಲನ : ಶೈಕ್ಷಣಿಕ ಕ್ಷೇತ್ರದ ಇಬ್ಬರು ಸಾಧಕರಿಗೆ ಸನ್ಮಾನ

0

  • ಪುತ್ತೂರು : ಪೆರುವಾಜೆ ಗ್ರಾಮದ ಲಲಿತಾ ಎಸ್ ಆಳ್ವ ಅವರ ಆಳ್ವಫಾರ್ಮ್ಸ್ ನಲ್ಲಿ ಜು.13 ರಂದು ನಡೆದ ಕುಟುಂಬ ಸಮ್ಮಿಲನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ತೋರಿದ ಇಬ್ಬರು ಸಾಧಕರನ್ನು ಸನ್ಮಾನಿಸಲಾಯಿತು.

  • ಕುಂಬ್ರ ವಿನೋದ್ ಪ್ರಸಾದ್ ರೈ ಮತ್ತು ಪೂರ್ಣಿಮಾ ರೈ ಅವರ ಪುತ್ರ, ಅಂಬಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದುಕೊಂಡು ಜೆಇಇ ಪರೀಕ್ಷೆಯಲ್ಲಿ 99.6 ಶೇ ಅಂಕ ಪಡೆದ ಭುವನ್ ರೈ ಕುಂಬ್ರ ಹಾಗೂ ಸುಳ್ಯ ಗಣೇಶ್ ಆಳ್ವ ಮತ್ತು ಸೀಮಾ ಗಣೇಶ್ ಆಳ್ವ ಅವರ ಪುತ್ರಿ, ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ರಿತಿ ಆಳ್ವ ಅವರ ಕುರಿತಾಗಿ ಆಳ್ವ ಫಾರ್ಮ್ಸ್ ನ ಕುಂಬ್ರ ದಯಾಕರ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ಆ ಬಳಿಕ  ರಾಮದಾಸ ಅಡಪ ಅವರು ಸನ್ಮಾನಿಸಿದರು.

ಅಗ್ರಾಳ ಮನೋಹರ ಆಳ್ವ ಅವರು ಅಭಿನಂದನ ಮಾತುಗಳನ್ನಾಡಿದರು. ವೇದಾವತಿ ಆಳ್ವ ಸುಳ್ಯ, ಎಸ್ ಜಿ ಪ್ರಭಾಕರ ರೈ ಎಣ್ಮೂರು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ, ರತ್ನಾವತಿ ರೈ ಪಿ.ಡಿ., ಸುಳ್ಯ ತಾ.ಪಂ.ಮಾಜಿ ಸದಸ್ಯ ಪಿ.ಡಿ.ಯತೀಂದ್ರನಾಥ ರೈ, ಯತೀಶ್ ಕುಮಾರ್ ಆಳ್ವ, ಪ್ರಭಾಕರ ರೈ ಎಣ್ಮೂರುಗುತ್ತು, ಸುಧಾಕರ ರೈ ಕುಂಬ್ರ, ರಾಜೇಶ್ ಆಳ್ವ ಸುಳ್ಯ ಉಪಸ್ಥಿತರಿದ್ದರು. ಆಳ್ವ ಫಾರ್ಮ್ಸ್ ನ ದಿವಾಕರ ಆಳ್ವ ವಂದಿಸಿದರು.

LEAVE A REPLY

Please enter your comment!
Please enter your name here