ಆಲಂಕಾರು: ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಇದರ ಆಶ್ರಯದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ 9ನೇ ಸೇವೆಯಾಗಿ ’ಯಾಗ ಸಂಕಲ್ಪ-ಮಾಗದ ವಧೆ’ ತಾಳಮದ್ದಲೆ ಜು.12ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮೋಹನ ಪಾಟಾಳಿ ಮೆಣಸಿನಕಾನ ಈಶ್ವರಮಂಗಲ, ಡಿ.ಕೆ. ಆಚಾರ್ಯ ಹಳೆನೇರೆಂಕಿ, ವಿದ್ಯಾ ಈಶ್ವರಮಂಗಲ, ಚೆಂಡೆ ಮದ್ದಲೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಶ್ರೀಹರಿ ನಗ್ರಿ , ಮಾ| ಸ್ಕಂದ ಈಶ್ವರಮಂಗಲ, ಮುಮ್ಮೆಳದಲ್ಲಿ ರಾಮ್ ಪ್ರಕಾಶ್ ಕೊಡಂಗೆ (ಮಯ), ಹರಿಶ್ಚಂದ್ರ ಗೌಡ ಕೋಡ್ಲ (ಧರ್ಮರಾಯ 1), ರಾಮ್‌ಪ್ರಸಾದ್ ಆಲಂಕಾರು (ನಾರದ), ಗಂಗಾಧರ ಶೆಟ್ಟಿ ಅಮ್ಮೆತ್ತಿಮಾರುಗುತ್ತು ಬಲ್ಯ ನೆಲ್ಯಾಡಿ (ಭೀಮ), ಗಣೇಶ್ ಹಿರಿಂಜ (ಅರ್ಜುನ), ದೀಕ್ಷಾ ಪಿ.ಕೆ. (ಇಂದ್ರಸೇನ), ರಾಘವೇಂದ್ರ ಭಟ್ ತೋಟಂತಿಲ (ಕೃಷ್ಣ 1), ಅಮ್ಮಿ ಗೌಡ ನಾಲ್ಗುತ್ತು (ಧರ್ಮರಾಯ 2), ದಿವಾಕರ ಆಚಾರ್ಯ ಹಳೆನೇರೆಂಕಿ (ಕೃಷ್ಣ 2), ಜಯರಾಂ ಗೌಡ ಬಲ್ಯ (ಮಾಗದ), ನಾರಾಯಣ ಭಟ್ ಆಲಂಕಾರು (ಕೃಷ್ಣ 3) ಸಹಕರಿಸಿದರು. ಅಮೆತ್ತಿಮಾರುಗುತ್ತು ಗಂಗಾಧರ ಶೆಟ್ಟಿ ಹಾಗೂ ಮನೆಯವರು ಸೇವಾರ್ಥಿಗಳಾಗಿದ್ದರು.
ಕಲಾಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ಸದಸ್ಯ ನಾರಾಯಣ ಭಟ್ ಆಲಂಕಾರು ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ ಮತ್ತು ದೇವಸ್ಥಾನದ ಸಿಬ್ಬಂದಿ ವರ್ಗದವರು, ಕಲಾ ಸಂಗಮದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.