ಪುತ್ತೂರು: ಜೂ.28ರಂದು ನಿಧನರಾದ ಉರ್ಲಾಂಡಿ ಬಾಲಕೃಷ್ಣರವರ ಶೃದ್ಧಾಂಜಲಿ ಸಭೆಯು ಜು.13ರಂದು ಪುತ್ತೂರು ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ನಡೆಯಿತು.
ನಿವೃತ್ತ ಎ.ಎಸ್.ಐ. ರಘುರಾಮ ಹೆಗ್ಡೆ ಉರ್ಲಾಂಡಿ, ಕಿಟ್ಟಣ್ಣ ಗೌಡ ಬಪ್ಪಳಿಗೆ, ಅನಿಲ್ ಉರ್ಲಾಂಡಿ, ಪುಷ್ಪರಾಜ್ ಹೆಗ್ಡೆ ಉರ್ಲಾಂಡಿ, ಯೋಗಾನಂದ ರಾವ್, ಸತ್ಯಾನಂದ ಭಂಡಾರಿ, ಮೃತರ ಪತ್ನಿ ಬಾಲಕಿ, ಸಹೋದರ ರಮೇಶ್ ಗೌಡ, ಮಕ್ಕಳಾದ ವಿನುತ್ ಬಿ., ರಶ್ಮಿ, ತನ್ವಿ ಬಿ., ಅಳಿಯ ಸಂದೀಪ್, ಸೊಸೆ ಮೈನಾ, ಮೊಮ್ಮಕ್ಕಳಾದ ಭವಿನ್ ಕೃಷ್ಣ, ಚಾರ್ವಿ, ಶ್ರೇಯಾನ್ವಿ ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರು ಉಪಸ್ಥಿತರಿದ್ದರು.
