ನಿಡ್ಪಳ್ಳಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಇರ್ದೆ ಬೆಟ್ಟಂಪಾಡಿ ಬಿಲ್ಲವ ಗ್ರಾಮ ಸಮಿತಿ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಅಧ್ಯಕ್ಷ ವಿಠಲ ಪೂಜಾರಿ ಚೆಲ್ಯಡ್ಕ ಇವರ ನೇತೃತ್ವದಲ್ಲಿ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಪುತ್ತೂರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ ಸಂಘದ ಮಹತ್ವವನ್ನು ತಿಳಿಸಿದರು.ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ಸಂಘದ ಬಗ್ಗೆ ವಿವರಿಸಿದರು.ಬಿಲ್ಲವ ಸಂಘದ ಆರ್ಯಾಪು ವಲಯ ಸಂಚಾಲಕ ಮಾಧವ ಪೂಜಾರಿ ರೆಂಜ, ಮಾಜಿ ಗ್ರಾಮ ಸಮಿತಿ ಅಧ್ಯಕ್ಷ ಕೋಟಿ ಪೂಜಾರಿ ಪತ್ತನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಸಮಿತಿ ರಚನೆ: ಇರ್ದೆ ಬೆಟ್ಟಂಪಾಡಿ ಬಿಲ್ಲವ ಗ್ರಾಮ ಸಮಿತಿಯ ಮುಂದಿನ ಮೂರು ವರ್ಷಗಳ ಅವದಿಗೆ ಅಧ್ಯಕ್ಷರಾಗಿ ಆನಂದ ಪೂಜಾರಿ ಅರಂತನಡ್ಕ, ಉಪಾಧ್ಯಕ್ಷರಾಗಿ ದಿಕ್ಷೀತ್ ಇರ್ದೆ, ಕಾರ್ಯದರ್ಶಿಯಾಗಿ ಮಂಜುನಾಥ ಪ್ರಸಾದ್ ಪತ್ತನಡ್ಕ, ಜೊತೆ ಕಾರ್ಯದರ್ಶಿಯಾಗಿ ಸದಾಶಿವ ಕಳೆಂಜಿಲ,ಕೋಶಾಧಿಕಾರಿಯಾಗಿ ಬಾಳಪ್ಪ ಪೂಜಾರಿ ಕೋರ್ಮಂಡ ಇವರನ್ನು ಆರಿಸಲಾಯಿತು.
ಮಹಿಳಾ ಸಮಿತಿ: ಮಹಿಳಾ ಸಮಿತಿ ಅಧ್ಯಕ್ಷರಾಗಿ ಶಕುಂತಳಾ ನೇಮು ಪೂಜಾರಿ, ಉಪಾಧ್ಯಕ್ಷರಾಗಿ ಜ್ಯೋತಿ ಕಳೆಂಜಿಲ, ಕಾರ್ಯದರ್ಶಿಯಾಗಿ ಸೌಜನ್ಯ ಹೊಸಲಕ್ಕೆ , ಜೊತೆ ಕಾರ್ಯದರ್ಶಿಯಾಗಿ ಪೃಥ್ವಿ ಬೈಲಾಡಿ, ಕೋಶಾಧಿಕಾರಿಯಾಗಿ ವಸಂತಿ ತಳಪಾಡಿ ಇವರನ್ನು ಆರಿಸಲಾಯಿತು.
ಶಕುಂತಲಾ ನೇಮು ಪೂಜಾರಿ ವರದಿ ವಾಚಿಸಿ, ಶ್ಯಾಮಲ ಮಾಧವ ಪೂಜಾರಿ ರೆಂಜ ವಂದಿಸಿದರು.