ಪುತ್ತೂರಿನ ಮೊದಲ ಬ್ರೈಡಲ್ ಮೇಕಪ್ ಸ್ಟುಡಿಯೋ ಗ್ಲೋ ಅಪ್ ಬೈ ಮಾನಸ ಶುಭಾರಂಭ

0

ಪುತ್ತೂರು: ನಗರದ ದರ್ಬೆ ಪ್ರದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಸೌಲಭ್ಯಗಳೊಂದಿಗೆ ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿಯನ್ನು ಹೊಂದಿರುವ “Glow Up by Manasa” ಎಂಬ ಹೆಸರಿನಲ್ಲಿ ನೂತನ ಕೇಂದ್ರವು ಜು.14ರಂದು ಉದ್ಘಾಟನೆಗೊಂಡಿತು.

ನೂತನ ಬ್ರೈಡಲ್ ಮೇಕಪ್ ಸ್ಟುಡಿಯೋವನ್ನು ದೀಪ ಬೆಳಗಿಸುವುದರೊಂದಿಗೆ ದ್ವಾರಕಾ ಗ್ರೂಪ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಎ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದ್ವಾರಕಾ ಸಮೂಹ ಸಂಸ್ಥೆಗಳು ಕಾರ್ಯ ನಿರ್ವಾಹಕ ನಿರ್ದೇಶಕರು ಅಮೃತಕೃಷ್ಣ ಎನ್, ಆರಾಧ್ಯ ಆರ್ಕೇಡ್ ಮಾಲಕರು ಕೃಷ್ಣವೇಣಿ ರೈ, ಉದ್ಯಮಿ ಅಶ್ವಿನ್ ರೈ ಉಪಸ್ಥಿತರಿದ್ದರು. ದುರ್ಗಾಗಣೇಶ್ ಸ್ವಾಗತಿಸಿ ವಂದಿಸಿದರು.


ಪ್ರಸಿದ್ಧ ಫ್ರೀಲಾನ್ಸ್ ಮೇಕಪ್ ಆರ್ಟಿಸ್ಟ್ ಮಾನಸ ಅವರ ಈ ಹೊಸ ಹೆಜ್ಜೆಯು ಮೇಕಪ್ ಕ್ಷೇತ್ರದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಆರಂಭವಾಗಿದೆ.
ಈ ಸ್ಟುಡಿಯೋದಲ್ಲಿ ವೃತ್ತಿಪರ ಮೇಕಪ್ ತರಬೇತಿಯೊಂದಿಗೆ, ಮದುವೆ ಹಾಗೂ ವಿಶೇಷ ಸಂದರ್ಭಗಳಿಗೆ ಮೇಕಪ್ ಸೇವೆ, ಸೀರೆ ಪ್ರಿಪ್ಲೇಟಿಂಗ್ ಹಾಗೂ ವಧು ಆಭರಣ ಬಾಡಿಗೆ (Bridal Rental Jewellery) ಸೇವೆಗಳೂ ಲಭ್ಯವಿವೆ.


ನಗರದ ಪ್ರಸ್ತುತ ಅವಶ್ಯಕತೆ ಹಾಗೂ ಬೆಳೆದಿರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳು ಮತ್ತು ಗ್ರಾಹಕರು ಸುಲಭವಾಗಿ ಬಳಸಬಹುದಾದ ರೀತಿಯಲ್ಲಿ ಸುಸಜ್ಜಿತವಾಗಿ ರೂಪುಗೊಂಡ ಈ ಕೇಂದ್ರವು ಇಲ್ಲಿನ ದರ್ಬೆ ಅರಾಧ್ಯ ಆರ್ಕೇಡ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಅನಾವರಣಗೊಂಡಿದೆ. ಸ್ಥಳೀಯರು ಸೇರಿದಂತೆ ಆಸಕ್ತರು ಈ ಹೊಸ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here