ಇಂದಿನ ಕಾರ್ಯಕ್ರಮ (16-07-2025)

0

ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ
ಕೆಯ್ಯೂರು ದೇವಿನಗರ ಶ್ರೀದೇವಿ ಸಂಕೀರ್ಣದಲ್ಲಿರುವ ಶಾಖೆಯಲ್ಲಿ ಥೈರಾಯಿಡ್, ಮಧುಮೇಹ ಉಚಿತ ತಪಾಸಣಾ ಶಿಬಿರ
ಬೊಳುವಾರು ಶ್ರೀ ದುರ್ಗಾ ಪರಮೇಶ್ವರೀ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹವನ, ನಾಗ ತಂಬಿಲ, ದೈವಗಳಿಗೆ ತಂಬಿಲ, ರಾತ್ರಿ ವಿಶೇಷ ದುರ್ಗಾಪೂಜೆ
ನೆಹರುನಗರ ವಿವೇಕಾನಂದ ಪಿಯು ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಬೆಳಿಗ್ಗೆ ೯ಕ್ಕೆ ವಿವೇಕ ನಾವಿನ್ಯ
ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦ರಿಂದ ಎಸ್‌ಪಿವೈಎಸ್‌ಎಸ್‌ನಿಂದ ರಾಜ್ಯ, ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರ, ಯೋಗ ಜೀವನ ದರ್ಶನ ಸಂಜೆ ೬ಕ್ಕೆ ಉದ್ಘಾಟನೆ
ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ, ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಅಗೇಲುಸೇವೆ
ನರಿಮೊಗರು ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಸಂಕ್ರಮಣ ಸೇವೆ, ಕಲ್ಲುರ್ಟಿಗೆ ಅಗೇಲು ಸೇವೆ
ಕಲ್ಲಾರೆ ಡಾ. ನಝೀರ್ ಅಹಮ್ಮದ್ ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಕೊಲೆಸ್ಟರಾಲ್, ಎಚ್‌ಬಿಎ೧ಸಿ, ಶುಗರ್, ಬಿ.ಎಂ.ಡಿ, ನ್ಯೂರೋಪಥಿ, ಕ್ಯಾಲ್ಸಿಯಂ ಉಚಿತ ತಪಾಸಣೆ
ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ ೧೧.೩೦ಕ್ಕೆ ತ್ರೈಮಾಸಿಕ ಕೆ.ಡಿ.ಪಿ. ಸಭೆ
ಕರ್ನಾಟಕ ಸುನ್ನೀ ಯುವಜನ ಸಂಘದ (ಎಸ್‌ವೈಎಸ್) ವತಿಯಿಂದ ಬೆಳಿಗ್ಗೆ ೮.೩೦ಕ್ಕೆ ಏಳ್ಮುಡಿಯಿಂದ ಕಿಲ್ಲೆ ಮೈದಾನದವರೆಗೆ `ಸೌಹಾರ್ದ ಸಂಚಾರ’ ಜಾಥಾ
ಕಾಣಿಯೂರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಐತ್ತೂರು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯದಲ್ಲಿ ಮಧ್ಯಾಹ್ನ ೧೨.೨೫ಕ್ಕೆ ಸಂಕ್ರಮಣ ತಂಬಿಲ, ಅನ್ನಸಂತರ್ಪಣೆ
ಆಲಂಕಾರು ಗ್ರಾಮದ ಕಮಿತ್ತಿಲು ಶ್ರೀ ಆದಿನಾಗ ಬ್ರಹ್ಮ ಮುಗೇರ್ಕಳ, ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಸಂಕ್ರಾಂತಿಯ ಅಗೇಲು ಸೇವೆ
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಭಜನಾ ಸಂಕೀರ್ತನೆ, ೭ರಿಂದ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ೧೧.೩೦ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಶ್ರೀ ಲಕ್ಷ್ಮೀಪೂಜೆ, ಮಹಾಪೂಜೆ
ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ರಾತ್ರಿ ಸಂಕ್ರಮಣ ಕೋಲ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ.
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಮುದರು ಆರ್ಯಾಪು, ಪೆಲತ್ತಡಿಯವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here