ಪುತ್ತೂರು: ಜು.16 ರಂದು ಸುರಿದ ಭಾರೀ ಮಳೆಗೆ ದರ್ಬೆ ವೈದ್ಯರ್ ಆಸ್ಪತ್ರೆಯ ಹಿಂದುಗಡೆ ಮಹಾಲಿಂಗ ಪೈ ಲೇ ಔಟ್ ನಲ್ಲಿ ಹಲವು ಮನೆಗಳು ಜಲಾವೃತವಾಗಿದೆ. ಮನೆಮಂದಿಗೆ ಜಲದಿಗ್ಭಂಧನವಾಗಿದೆ.
ಖಾಸಗಿ ವ್ಯಕ್ತಿಗಳು ರಾಜಕಾಲುವೆ ಅತಿಕ್ರಮಣ ಮಾಡಿದ ಕಾರಣ ಮಳೆ ನೀರು ಹರಿವಿಗೆ ತೊಂದರೆ ಆಗಿದ್ದು, ಈ ಕುರಿತು ನಗರಸಭೆಗೆ ಲಿಖಿತ ದೂರು ಕೊಟ್ಟಿದ್ದರೂ ಸೂಕ್ತ ತೆರವು ಕಾರ್ಯ ಮಾಡದಿರುವುದರ ಬಗ್ಗೆ ಸ್ಥಳೀಯರು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.