ಎಸ್.ಎಂ.ಎ ದ.ಕ ಸೌತ್ ಜಿಲ್ಲಾ ಸಮಿತಿಯಿಂದ ಲೀಡರ‍್ಸ್ ಕ್ಯಾಂಪ್ – ಉಮ್ರಾ ಯಾತ್ರೆಗೆ ತೆರಳಲಿರುವ ಯೂಸುಫ್ ಗೌಸಿಯಾರವರಿಗೆ ಬೀಳ್ಕೊಡುಗೆ

0

ಪುತ್ತೂರು: ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದ.ಕ ಸೌತ್ ಜಿಲ್ಲಾ ಸಮಿತಿ ವತಿಯಿಂದ ಲೀಡರ‍್ಸ್ ಕ್ಯಾಂಪ್ ‘ಫೋಕಸ್’ ಜು.13ರಂದು ವಿಟ್ಲ ಟಿಪ್ಪುನಗರ ದಾರುನ್ನಜಾತ್ ಪಿ.ಕೆ ಉಸ್ತಾದ್ ಸ್ಮಾರಕ ಭವನದಲ್ಲಿ ನಡೆಯಿತು. ಎಸ್.ಎಂ.ಎ ದ.ಕ ಸೌತ್ ಜಿಲ್ಲಾ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಮಾತನಾಡಿ ಎಸ್.ಎಂ.ಎ ಕಳೆದ ಆರು ವರ್ಷಗಳಲ್ಲಿ ರಾಜ್ಯಾದ್ಯಂತ ಮೊಹಲ್ಲಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಉತ್ತಮ ಸೇವೆಯನ್ನು ಮಾಡುತ್ತಾ ಬಂದಿದೆ, ಮುಂದಿನ ದಿನಗಳಲ್ಲಿ ಎಲ್ಲಾ ರೀಜನ್‌ಗಳು ಸಂಘಟಿತವಾಗಿ ಕಾರ್ಯಾಚರಣೆ ನಡೆಸಿ ಎಸ್.ಎಂ.ಎ ಸಂಘಟನೆಯನ್ನು ಬಲಿಷ್ಠಗೊಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ವಿಷಯ ಮಂಡನೆ ನಡೆಸಿದ ಪೊಸೋಟು ವಿದ್ಯಾ ಸಂಸ್ಥೆಯ ಪ್ರಿನ್ಸಿಪಾಲ್ ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್, ಮೊಹಲ್ಲಾಗಳಲ್ಲಿ ಆಡಳಿತ ಸಮಿತಿಗಳು ಒಳ್ಳೆಯ ರೀತಿಯ ಕಾರ್ಯಾಚರಣೆ ಮಾಡುವುದರ ಮೂಲಕ ಮೊಹಲ್ಲಾಗಳಲ್ಲಿ ನಡೆಯುವ ಅನಾಚಾರಗಳಿಗೆ ಕಡಿವಾಣ ಹಾಕಿ ಉತ್ತಮ ಮೊಹಲ್ಲಾಗಳನ್ನಾಗಿ ಮಾರ್ಪಡಿಸಲು ಆಡಳಿತ ಸಮಿತಿಗಳು ಮುಂದೆ ಬರಬೇಕು, ಈ ನಿಟ್ಟಿನಲ್ಲಿ ಎಸ್‌ಎಂಎ ನಡೆಸುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

ಉಮ್ರಾ ಯಾತ್ರೆಗೆ ತೆರಳಲಿರುವ ಎಸ್‌ಎಂಎ ಸೌತ್ ಜಿಲ್ಲಾಧ್ಯಕ್ಷರಾದ ಯೂಸುಫ್ ಗೌಸಿಯಾ ಸಾಜ ಅವರಿಗೆ ಎಸ್.ಎಂ.ಎ ಜಿಲ್ಲಾ ಸಮಿತಿ ವತಿಯಿಂದ ಬೀಳ್ಕೊಡುಗೆ ಸನ್ಮಾನ ನಡೆಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಕೊಳಕೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಎಸ್.ಎಂ.ಎ ರಾಜ್ಯ ನಾಯಕರಾದ ಎಸ್.ಎಸ್ ಮೂಸ ಹಾಜಿ ಸಾಂಬರ್ತೋಟ, ಅಬ್ದುಲ್ ರಹ್ಮಾನ್ ಸಂಪಿಲ, ಅಬೂಬಕ್ಕರ್ ಸೆರ್ಕಳ, ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ, ವಿಟ್ಲ ಝೋನ್ ಎಸ್‌ವೈಎಸ್ ಅಧ್ಯಕ್ಷ ರಹೀಂ ಸಖಾಫಿ, ವಿಟ್ಲ ಝೋನ್ ಜಮೀಯ್ಯತುಲ್ ಉಲಮಾ ಅಧ್ಯಕ್ಷ ಅಬ್ದುಲ್ ಖಾದರ್ ಫೈಝಿ, ಕೆ ಎಂ ಜೆ ವಿಟ್ಲ ಝೋನ್ ಅಧ್ಯಕ್ಷ ಉಸ್ಮಾನ್ ಹಾಜಿ, ಎಸ್.ಎಂ.ಎ ಉಪಾಧ್ಯಕ್ಷ ಲತೀಫ್ ಸಖಾಪಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಸೆರ್ಕಳ, ಸಲೀಂ ಹಾಜಿ, ಹಕೀಮ್ ಶಾಂತಿನಗರ, ಉಮರ್ ವಿಟ್ಲ, ಖಾದರ್ ಸಅದಿ ಕನ್ಯಾನ ಮತ್ತು ಎಸ್‌ಎಂಎ ಜಿಲ್ಲಾ ಝೋನ್, ರೀಜನಲ್ ನಾಯಕರು ಉಪಸ್ಥಿತರಿದ್ದರು, ಜಿಲ್ಲಾ ನಾಯಕ ಅಬ್ದುಲ್ ಖಾದರ್ ಸಖಾಫಿ ವಂದಿಸಿದರು.

LEAVE A REPLY

Please enter your comment!
Please enter your name here