ಪುತ್ತೂರು: ಜು.13ರಂದು ರಾತ್ರಿ ಪೆರ್ನೆ ಗ್ರಾಮದ ಎ.ಎಂ.ಅಡಿಟೋರಿಯಂ ಹಾಲ್‌ನ ಬಳಿ ನಿಲ್ಲಿಸಿದ್ದ ರಿಕ್ಷಾ ಕಳ್ಳತನಗೊಂಡ ಘಟನೆ ವರದಿಯಾಗಿದೆ.
ಪೆರ್ನೆ ನಿವಾಸಿ ಅಶ್ರಫ್ ಪಿ.ಎಂಬವರು ತನ್ನ ತಂಗಿ ಮಗನಾದ ತೌಫಿಕ್ ಎಂಬಾತನ ಮಾಲಕತ್ವದ ಆಟೋ ರಿಕ್ಷಾದ ಸಾಲದ ಕಂತನ್ನು ತೌಫಿಕ್‌ನ ಒಪ್ಪಿಗೆಯಂತೆ ಬ್ಯಾಂಕಿಗೆ ಮರುಪಾವತಿ ಮಾಡಿ ಸುಮಾರು 20 ದಿನದಿಂದ ಸದ್ರಿ ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡಿದ್ದರು. ಜು.13ರಂದು ಆಟೋರಿಕ್ಷಾದಲ್ಲಿ ಬಾಡಿಗೆ ಮಾಡಿ ರಾತ್ರಿ ಸುಲೈಮಾನ್ ಎಂಬವರ ಮನೆಯ ಎದುರುಗಡೆ ಪೆರ್ನೆ ಗ್ರಾಮದ ಎ.ಎಂ.ಅಡಿಟೋರಿಯಂ ಹಾಲ್‌ನ ಬಳಿ ಲಾಕ್ ಮಾಡಿ ನಿಲ್ಲಿಸಿದ್ದರು. ಜು.14ರಂದು ಮುಂಜಾನೆ ಮಸೀದಿಗೆ ಹೋಗಲು ಆಟೋರಿಕ್ಷಾದ ಬಳಿಗೆ ಬಂದಾಗ ಆಟೋರಿಕ್ಷಾ ನಿಲ್ಲಿಸಿದ ಸ್ಥಳದಲ್ಲಿ ಕಾಣಿಸದೇ ಇದ್ದು, ಕಳವಾಗಿರುವುದಾಗಿ ವರದಿಯಾಗಿದೆ. ಇದರ ಅಂದಾಜು ಮೌಲ್ಯ 45 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಶ್ರಫ್ ನೀಡಿರುವ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.