ನೆಲ್ಯಾಡಿ: ಬಿದ್ದು ಸಿಕ್ಕಿದ ಮೊಬೈಲ್ ಹಾಗೂ ಅದರ ಜೊತೆ ಇದ್ದ 500 ರೂಪಾಯಿಯನ್ನು ಪೊಲೀಸರ ಮೂಲಕ ವಾರಿಸುದಾರರಿಗೆ ಹಿಂತಿರುಗಿಸುವ ಮೂಲಕ ಸಿದ್ದಿಕ್ ಗಂಡಿಬಾಗಿಲು ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸಿದ್ದೀಕ್ ಅವರು ಜು.17ರಂದು ಕಲ್ಲೇರಿಯಿಂದ ಉಪ್ಪಿನಂಗಡಿಗೆ ಬರುತ್ತಿದ್ದ ವೇಳೆ ಕರಾಯ ಪೆಟ್ರೋಲ್ ಪಂಪ್ ಸಮೀಪ ಮೊಬೈಲ್ ಬಿದ್ದು ಸಿಕ್ಕಿತ್ತು. ಸಿದ್ದೀಕ್ ಅವರು ಮೊಬೈಲ್ ಹಾಗೂ ಅದರ ಕವರ್ನೊಳಗೆ ಹಾಕಿದ್ದ 500 ರೂಪಾಯಿಯನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪೊಲೀಸರು ಅದರ ವಾರೀಸುದಾರರಾದ ಶ್ರೀಶಕುಮಾರ್ ಅವರಿಗೆ ಮೊಬೈಲ್ ಹಾಗೂ ನಗದು ಹಿಂತಿರುಗಿಸಿದ್ದಾರೆ.