ಕಡಬ: ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಕಡಬದಲ್ಲಿ ನಡೆಯುವ 8ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಜು.20ರಂದು ಅಪರಾಹ್ನ ನಡೆಯಲಿದೆ.
ಆಮಂತ್ರಣ ಬಿಡುಗಡೆಯ ಬಳಿಕ ಯಕ್ಷ ಗೆಳೆಯರ ಬಳಗ ಕಡಬ ಇವರ ಪ್ರಾಯೋಜಕತ್ವದಲ್ಲಿ ‘ನಚಿಕೇತ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ವಿ.ಹಿಂ.ಪ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.