ಬಡಗನ್ನೂರು: ಸುಳ್ಯಪದವು ಸರ್ವೋದಯ ವಿದ್ಯಾ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುವ ಸರ್ವೋದಯ ಪ್ರೌಢಶಾಲಾ ಶಿಕ್ಷಕರ ಕ್ಷೇತ್ರದ ಅಧ್ಯಕ್ಷರಾಗಿ ಆನಂದ ಪಾದಗದ್ದೆ, ಉಪಾಧ್ಯಕ್ಷರಾಗಿ ಸತೀಶ್ ಸಣಗೋಲು ಹಾಗೂ ಶ್ರೀ ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆ ಇದರ ಅಧ್ಯಕ್ಷರಾಗಿ ಅಬ್ದುಲ್ ಖಾದರ್, ಖಜಾಂಜಿಯಾಗಿ ಗಿರಿಧರ ಮಣಿಯಾನಿ ಕುಲದಪಾರೆ, ಮಕ್ಕಳ -ಸುರಕ್ಷಾ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ಚಂದ್ರ ಮರದ ಮೂಲೆ, ಉಪಾಧ್ಯಕ್ಷರಾಗಿ ರೂಪ ಪದಡ್ಕ, ತಾಯಂದಿರ ಸಮಿತಿಯ ಅಧ್ಯಕ್ಷರಾಗಿ ಸತ್ಯಾವತಿ ನಿಡಿಯಡ್ಕ ಉಪಾಧ್ಯಕ್ಷರಾಗಿ ಶಶಿಕಲಾ ಶಬರಿನಗರ ಇವರು ಆಯ್ಕೆಯಾಗಿದ್ದಾರೆ.

ಸಮಿತಿಯ ಸದಸ್ಯರುಗಳಾಗಿ ಚಂದ್ರಹಾಸ ರೈ ಏರಾಜೆ, ಪಕೀರ ಮೈಂದನಡ್ಕ ವೀಣಾ ಅಜಡ್ಕ, ಶಶಿಕಲಾ ಕಕ್ಕೆಬೆಟ್ಟು, ಚಂದ್ರಿಕಾ ಶಬರಿನಗರ, ಪ್ರಮೀಳಾ ಕನ್ನಡ್ಕ, ಶಶಿಕಲಾ ಕಜಮೂಲೆ, ಪ್ರೇಮ ಸುಳ್ಯಪದವು, ರಮಾಕಾಂತಿ ಬೋಳಂ ಕೂಡ್ಲು , ಕಾವ್ಯ ಕಾಯರ್ಪದವು ಆಯ್ಕೆಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವರಾಮ್ ಹೆ ಚ್ ಡಿ ,ಸಂಸ್ಥೆಯ ಸಂಚಾಲಕ ಮಹಾದೇವ ಭಟ್ ಎಸ್ ಮುಖ್ಯೋಪಾಧ್ಯಾಯರಾದ ಸುಖೇಶ್ ರೈ ಹಾಗೂ ಶಿಕ್ಷಕ ವೃಂದದವರುು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.