ಜು.27: ಬೆಟ್ಟಂಪಾಡಿ ಗೆಳೆಯರ ಬಳಗದಿಂದ ಗುತ್ತು ಮನೆಯ ಸಹಕಾರದಲ್ಲಿ ಗುತ್ತು ಮನೆಯ ಗದ್ದೆಯಲ್ಲಿ ಕೆಸರ್‍ದ ಗೊಬ್ಬುಲು

0

ಪುತ್ತೂರು: ಬೆಟ್ಟಂಪಾಡಿ ಗೆಳೆಯರ ಬಳಗದ ವತಿಯಿಂದ ಬೆಟ್ಟಂಪಾಡಿ ಗುತ್ತು ಮನೆಯ ಸಹಕಾರದಲ್ಲಿ ಗುತ್ತು ಮನೆಯ ಗದ್ದೆಯಲ್ಲಿ ಜು.27ರಂದು ಬೆಳಿಗ್ಗೆ 9 ರಿಂದ ಕೆಸರ್ದ ಗೊಬ್ಬುಲು ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಗುತ್ತು ಮನೆಯ ಹಿರಿಯರಾದ ಚಂದ್ರಾವತಿ ರೈ ಗುತ್ತುರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡು, ಮೊಕ್ತೇಸರ ಹಾಗೂ ಬೆಟ್ಟಂಪಾಡಿ ಗುತ್ತು ಮನೆಯ ವಿನೋದ್ ಕುಮಾರ್ ರೈ ಗುತ್ತು, ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. 9.30ರಿಂದ ಹಲವು ಕ್ರೀಡಾಕೂಟ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here