ನೆಲ್ಯಾಡಿ: ಜು.25ರಂದು ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಮರಬಿದ್ದು ಕೌಕ್ರಾಡಿ ಗ್ರಾ.ಪಂ.ಸದಸ್ಯ ಕುರಿಯಾಕೋಸ್ ಯಾನೆ ರೋಯಿ ಅವರ ಸಹೋದರ, ಇಚ್ಲಂಪಾಡಿ ಗ್ರಾಮದ ಕಲ್ಲರ್ಬ ನಿವಾಸಿ ಅಬ್ರಹಾಂ ಟಿ.ಎಂ.ಎಂಬವರ ಮನೆಗೆ ಹಾನಿ ಸಂಭವಿಸಿದೆ.

ಮರಬಿದ್ದ ಪರಿಣಾಮ ಅಬ್ರಹಾಂರವರ ಮನೆಯ ಮೇಲ್ಛಾವಣಿಗೆ ಹಾಕಲಾಗಿದ್ದ ಸುಮಾರು 35 ಸಿಮೆಂಟ್ ಶೀಟ್‌ಗಳು ಹಾನಿಗೊಂಡಿದ್ದು ಗೋಡೆ ಸಹ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೌಕ್ರಾಡಿ ಗ್ರಾ.ಪಂ.ಪಿಡಿಒ ದೇವಿಕಾ, ಇಚ್ಲಂಪಾಡಿ ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಜಂಗಮಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಚ್ಲಂಪಾಡಿಯ ಕ್ರಿಶ್ಚಿಯನ್ ಬ್ರದರ‍್ಸ್ ಟ್ರಸ್ಟ್ ಹಾಗೂ ಊರವರ ಸಹಕಾರದಲ್ಲಿ ಮನೆಗೆ ಮತ್ತೆ ಶೀಟ್ ಅಳವಡಿಸಿ ದುರಸ್ತಿಗೊಳಿಸಲಾಗಿದೆ.