ಬಡಗನ್ನೂರು: ಬಡಗನ್ನೂರು ಇಲ್ಲಿನ ದ.ಕ.ಜಿ.ಪಂ.ಉ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆಟಿಕೂಟ ಕಾರ್ಯಕ್ರಮ ಜು.26 ರಂದು ಶಾಲಾ ಅಭಿಮಾನ್ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಕಕ್ತಿಗಳಾಗಿ ಶಾಲಾ ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ ಆಟಿ ತಿಂಗಳ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.
ಕುಂಬ್ರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೖೆ ಪಳ್ಳತ್ತಾರು, ವಿದ್ಯಾಶ್ರೀ ಸೇನರಮಜಲು, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಮಹಿಳಾ ಕಾರ್ಯದರ್ಶಿ ಶಂಕರಿ ಪಟ್ಟೆ ಆಟಿ ವಿಶೇಷತೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೖೆ ಕುದ್ಕಾಡಿ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ತಮ್ಮ ಹಿರಿಯರು ಆಟಿ ತಿಂಗಳಲ್ಲಿ ಕಷ್ಟಕರ ಜೀವನ ಮಾಡುತ್ತಿದ್ದರು. ಆ ಸಂಧರ್ಭದಲ್ಲಿ ಸೋಪು ತರಕಾರಿ ತಿಂದು ಜೀವನ ಮಾಡುತ್ತಿದ್ದರು. ನೖೆಸರ್ಗಿಕವಾಗಿ ದೊರೆಯುವ ಪದಾರ್ಥ ಸೇವನೆಯಿಂದ ಸದೃಡದಿಂದ ಯಾವುದೇ ರೋಗರುಜಿನಗಳಿಲ್ಲದೆ ಆರೋಗ್ಯವಂತರಾಗಿದ್ದರು. ಆಟಿ ಈ ತಿಂಗಳಲ್ಲಿ ಸೊಪ್ಪು-ತರಕಾರಿಯಲ್ಲಿ ರೋಗನಿರೋಧಕ ಶಕ್ತಿ ಇರುವುದರಿಂದ ವಿವಿಧ ರೀತಿಯ ಖಾದ್ಯ ತಯಾರಿಸಿ ಸೇವನೆ ಮಾಡಲಾಗುತ್ತದೆ. ಎಂದು ಹೇಳಿ ಶುಭ ಹಾರೖೆಸಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಗೌಡ ಕನ್ನಯ, ತಿಂಗಳ ಉಸ್ತುವಾರಿ ಸದಸ್ಯರಾದ ರಹಿಯಾನ ಮೖೆಂದನಡ್ಕ, ಕಾವ್ಯ ಪೖೆರುಪುಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಲೋಚನಾ ನೆರ್ಲಂಪ್ಪಾಡಿ, ಮಾಜಿ ಅಧ್ಯಕ್ಷ ಬಾಬು ಮೂಲ್ಯ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಮಕ್ಕಳ ಪೋಷಕರು ಮತ್ತು ಪುಟಾಣಿ ಮಕ್ಕಳು ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಪ್ರಾಸ್ತಾವಿಕ ಮಾತನಾಡಿ,ಸ್ವಾಗತಿಸಿದರು. ಸಹ ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು. ಅತಿಥಿ ಶಿಕ್ಷಕಿ ಮಧುಶ್ರೀ, ಗೌರವ ಶಿಕ್ಷಕಿ ಚೖೆತ್ರ, ಸರಿತಾ ಜ್ಞಾನದೀಪ ಶಿಕ್ಷಕಿ ಸೌಮ್ಯ ಸಹಕರಿಸಿದರು.
ಆಟಿ ವಿಶೇಷ ಖಾದ್ಯಗಳು
ಪತ್ರಡೆ, ಪಾಲಕ್ ಚಟ್ನಿ , ಒಂದೆಲಗ ಚಟ್ನಿ, ಸಜಂಕ್ ಪಲ್ಯ, ಆಟಿಸೊಪ್ಪು ಪಾಯಸ, ಬಸಲೆ ಪೋಡಿ, ಸೌತೆ ಅಲಸಂಡೆ ಬೀಜ ಸಾಂಬಾರ್ ಹೀಗೆ ಹಲವಾರು ಬಗೆಯ ಖಾದ್ಯ ತಯಾರಿಸಲಾಗಿತ್ತು.