ಹೆತ್ತವರು, ಮಾತೃಭಾಷೆ, ಹುಟ್ಟಿದ ಊರನ್ನು ಮರೆಯದಿರಿ-ಮೈಕಲ್ ಡಿ’ಸೋಜ
ಪುತ್ತೂರು: ಸಿ.ಎಲ್.ಸಿ ಹಾಗೂ ಡೊನ್ ಬೊಸ್ಕೊ ಕ್ಲಬ್ ಚರ್ಚ್ ಅಭಿವೃದ್ಧಿಯಲ್ಲಿ ಜೊತೆಗೆ ಸಮುದಾಯದ ಅಭಿವೃದ್ಧಿಗೆ ದುಡಿಯುತ್ತಿರುವುದು ಶ್ಲಾಘನೀಯ. ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಕ್ಕಳೈ ಶಿಕ್ಷಣವಂತರಾಗುತ್ತಾರೆ ಜೊತೆಗೆ ಸಮುದಾಯವೂ ಬೆಳೆಯುತ್ತದೆ. ದೇಶದ ಯಾವ ಮೂಲೆಯಲ್ಲಿದ್ದರೂ ನಾವು ನಮ್ಮ ಹೆತ್ತವರನ್ನು, ಮಾತೃಭಾಷೆಯನ್ನು ಹಾಗೂ ಬೆಳೆದ(ಹುಟ್ಟಿದ) ಊರನ್ನು ಎಂದಿಗೂ ಮರೆಯದಿರಿ ಎಂದು ಅನಿವಾಸಿ ಉದ್ಯಮಿ(ಪುತ್ತೂರು/ದುಬೈ) ಮೈಕಲ್ ಡಿ’ಸೋಜರವರು ಹೇಳಿದರು.

1978ರಲ್ಲಿ ಸ್ಥಾಪನೆಗೊಂಡ ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ಸಂಸ್ಥೆಯು ಸಂಸ್ಥೆಯ ಪ್ರೇರಕ ಸಂತರಾದ ಸೈಂಟ್ ಇಗ್ನೇಷಿಯಸ್ ಆಫ್ ಲೊಯೋಲಾರವರ ಹಬ್ಬದ ಪ್ರಯುಕ್ತ ದಿವ್ಯ ಬಲಿಪೂಜೆ ಹಾಗೂ ಹಿತೈಷಿಗಳ ಸಹಮಿಲನ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜು.27ರಂದು ಜರಗಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸೇವೆ ಮುಖೇನ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯ-ವಂ|ಪ್ರವೀಣ್ ಮಾರ್ಟಿಸ್:
ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ವೈಸ್ ಚಾನ್ಸಲರ್ ವಂ|ಪ್ರವೀಣ್ ಮಾರ್ಟಿಸ್ ರವರು ಮಾತನಾಡಿ, ಪ್ರೇರಕ ಸಂತರಾದ ಸಂತ ಇನಾಸ್ ಲೋಯೊಲಾರವರು ಕೂಡ ಪ್ರೀತಿಯಿಂದ ಸೇವೆಯನ್ನು ಮಾಡಿ ಎಂದಿದ್ದರು. ಅದರಂತೆ ಸಿ.ಎಲ್.ಸಿ ಸಂಸ್ಥೆಯು ಸೇವೆ ಮುಖೇನ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈ ಸೇವಾ ಮನೋಭಾವನೆಯು ಮುಂದಿನ ದಿನಗಳಲ್ಲೂ ನಿರಂತರವಾಗಿ ಮುಂದುವರೆಯಲಿ ಎಂದರು.
ಸಮುದಾಯದ ಅಭಿವೃದ್ಧಿಗೆ ನೆರವಿನ ಹಸ್ತ ಚಾಚೋಣ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಸಿ.ಎಲ್.ಸಿ ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕರಾದ ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಕಳೆದ 47 ವರ್ಷಗಳಿಂದ ಸಿ.ಎಲ್.ಸಿ ಸಂಸ್ಥೆಯು ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಮಾತ್ರವಲ್ಲ ಆರೋಗ್ಯಕರ ಸಮುದಾಯ ಕಟ್ಟುವಲ್ಲಿಯೂ ಶ್ರಮಿಸಿದೆ. ಸಮುದಾಯದ ಅಭಿವೃದ್ಧಿಗೆ ನಾವು ನಮ್ಮ ಕೈಲಾದಷ್ಟು ನೆರವಿನ ಹಸ್ತ ಚಾಚಿದ್ದಲ್ಲಿ ಸಮುದಾಯ ಬೆಳೆಯಬಲ್ಲುದು ಎಂದರು.
ದಾನಿಗಳ ದಾನವನ್ನು ಫಲಾನುಭವಿಗಳಿಗೆ ತಲುಪಿಸುವವರೇ ಸನ್ಮಾನಕ್ಕೆ ಅರ್ಹರು-ಆಲ್ವಿನ್ ರೊಡ್ರಿಗಸ್;
ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಸಂಘದ ಎಜ್ಯುಕೇರ್ ಸಮಿತಿಯ ಗೌರವಾಧ್ಯಕ್ಷ ಸಿಎ ಆಲ್ವಿನ್ ಹೆನ್ರಿ ರೊಡ್ರಿಗಸ್ ಮಾತನಾಡಿ, ಕಳೆದ 14 ವರ್ಷಗಳಿಂದ ಸಿ.ಎಲ್.ಸಿ ಸಂಸ್ಥೆಯ ಮುಖಾಂತರ ಎಜ್ಯುಕೇರ್ ನಾಮದಡಿಯಲ್ಲಿ ನಾನು ಮತ್ತು ನನ್ನ ಸಹೋದರ ಲ್ಯಾನ್ಸಿ ರೊಡ್ರಿಗಸ್ ಮಕ್ಕಳ ಶಿಕ್ಷಣಕ್ಕೆ ಧನ ಸಹಾಯದ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ನಮ್ಮಲ್ಲಿ ಏನು ಇದೆ ಅದನ್ನು ಫಲಾನುಭವಿಗಳಿಗೆ ನೀಡುವುದು ಉತ್ತಮ ಚಿಂತನೆಯಾಗಿದೆ. ದಾನಿಗಳು ನೀಡಿದ ದಾನವನ್ನು ನಿಸ್ವಾರ್ಥವಾಗಿ ಫಲಾನುಭವಿಗಳಿಗೆ ತಲುಪಿಸುವವರಿಗೆ ನಿಜವಾದ ಸನ್ಮಾನ ಸಿಗಬೇಕು ಎಂದರು.
ವಿದ್ಯಾರ್ಥಿವೇತನ ವಿತರಣೆ:
ಪುತ್ತೂರಿನ ಉದ್ಯಮಿ, ದಿವಂಗತ ಎ.ಬಿ ವೇಗಸ್ ರವರ ಧತ್ತಿನಿಧಿ ಸ್ಮರಣಾರ್ಥ ಫಲಾನುಭವಿಗಳಾದ ರಿಶಲ್ ಮಸ್ಕರೇನ್ಹಸ್ ರೋಟರಿಪುರ, ಲೆನಿಶಾ ಮಿಶಲ್ ಡಿ’ಸೋಜ ಬಲ್ನಾಡು, ಮೇವಿನ್ ಮಿನೇಜಸ್ ಮೊಟ್ಟೆತ್ತಡ್ಕ, ಡ್ಯಾಪ್ನಿ ಡಿ’ಸೋಜ ಪದವು, ಪ್ರಿನ್ಸನ್ ಮೊಂತೇರೊ ಕಲ್ಲಾರೆ, ಮರೀನಾ ಜೇನ್ ಮೊಂತೇರೊ ಕಲ್ಲಾರೆ, ರೆಮೋನಿ ಬೆನೆಡಿಕ್ಟ್ ಮಾಡ್ತಾ ಪುತ್ತೂರು, ರಿತೇಶ್ ಡಿ’ಸೋಜ ಬಲ್ನಾಡು, ಕೀರ್ತನ್ ಪ್ರಕಾಶ್ ಡಿ’ಸೋಜ ಮರೀಲು, ಆಲ್ವಿನ್ ಡಿ’ಸೋಜ ಮರೀಲುರವರುಗಳಿಗೆ ಮುಖ್ಯ ಅತಿಥಿ ಮೈಕಲ್ ಡಿ’ಸೋಜರವರು ವಿದ್ಯಾರ್ಥಿವೇತನವನ್ನು ವಿತರಿಸಿದರು.
ಗೌರವ:
ಸಂಸ್ಥೆಯ ಸದಸ್ಯರಾಗಿದ್ದು ಬಲ್ನಾಡು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ಜೊತೆಗೆ ಮಾಯಿದೆ ದೇವುಸ್ ಚರ್ಚ್ ನ ಬಲ್ನಾಡು ವಾಳೆಯ ಗುರಿಕಾರರಾಗಿ ಆಯ್ಕೆಯಾಗಿರುವ ಆಂಬ್ರೋಸ್ ಡಿ’ಸೋಜರವರನ್ನು ಈ ಸಂದರ್ಭದಲ್ಲಿ ಹೂಗುಚ್ಛ ನೀಡಿ ಗೌರವಿಸಲಾಯಿತು.
ಪುತ್ತೂರು ರೊಡ್ರಿಗಸ್ ಫಾರ್ಮ್ ಮಾಲಕ ಲ್ಯಾನ್ಸಿ ರೊಡ್ರಿಗಸ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೊ, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರು ವಂ|ಜೆ.ಬಿ ಮೊರಾಸ್, ಧರ್ಮಭಗಿನಿಯರ ಸಹಿತ ಪುತ್ತೂರು, ಮರೀಲು, ಬನ್ನೂರು ಚರ್ಚ್ ವ್ಯಾಪ್ತಿಯ ಹಿತೈಷಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಾಯಿದೆ ದೇವುಸ್ ಚರ್ಚ್ ಗಾಯನ ಮಂಡಳಿ ಪ್ರಾರ್ಥಿಸಿದರು. ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ಡಾ|ಎಲ್ಯಾಸ್ ಪಿಂಟೊ ಸ್ವಾಗತಿಸಿ, ಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜ ವರದಿ ಮಂಡಿಸಿದರು. ಉಪಾಧ್ಯಕ್ಷ ರೋಯಿಸ್ಟನ್ ಡಾಯಸ್ ವಂದಿಸಿದರು. ಸನ್ಮಾನಿತರ ಪರಿಚಯವನ್ನು ಸದಸ್ಯ ಡಾ|ಪ್ರಕಾಶ್ ಡಿ’ಸೋಜ ಹಾಗೂ ಓಸ್ವಾಲ್ಡ್ ಲೋಬೊರವರು ನೀಡಿದರು.ಮಾಜಿ ಅಧ್ಯಕ್ಷ ಜೋನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
ಕಿಡ್ನಿ ರೋಗಿಗೆ ರೂ.51 ಸಾವಿರ ಚೆಕ್ ಹಸ್ತಾಂತರ..
ಕಳೆದ ಹದಿನೆಂಟು ವರ್ಷಗಳಿಂದ ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಸಂಸ್ಥೆಯ ಹಿರಿಯ ಸದಸ್ಯ ಸೈಮನ್ ವೇಗಸ್ ರವರ ತನ್ನ ಹೆಚ್ಚಿನ ಚಿಕಿತ್ಸೆಗೆ ಸಂಸ್ಥೆಯ ಸದಸ್ಯರಿಂದ ರೂ.51 ಸಾವಿರ ಸಂಗ್ರಹವಾಗಿದ್ದು ಈ ಮೊತ್ತದ ಚೆಕ್ ಅನ್ನು ಫಲಾನುಭವಿ ಸೈಮನ್ ವೇಗಸ್ ರವರ ಪತ್ನಿ ಅಂಬ್ರೋಸಿನ್ ವೇಗಸ್ ರವರಿಗೆ ಹಸ್ತಾಂತರಿಸಲಾಯಿತು. ವಿಶೇಷವೇನೆಂದರೆ ಸೈಮನ್ ವೇಗಸ್ ರವರ ಪತ್ನಿ ಅಂಬ್ರೋಸಿನ್ ವೇಗಸ್ ರವರು ತನ್ನ ಕಿಡ್ನಿಯನ್ನು ಪತಿಗೋಸ್ಕರ ದಾನ ಮಾಡಿರುತ್ತಾರೆ.
ದಿವ್ಯ ಬಲಿಪೂಜೆ..
ಸಿ.ಎಲ್.ಸಿ ಸಂಸ್ಥೆಯ ಹಬ್ಬದ ಪ್ರಯುಕ್ತ ಸಭಾ ಕಾರ್ಯಕ್ರಮದ ಮುನ್ನ ಮಾಯಿದೆ ದೇವುಸ್ ಚರ್ಚ್ ನಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ವೈಸ್ ಚಾನ್ಸಲರ್ ವಂ|ಪ್ರವೀಣ್ ಮಾರ್ಟಿಸ್ ರವರು ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೊ, ಮರೀಲು ಚರ್ಚ್ ಧರ್ಮಗುರು ವಂ|ಜೆ.ಬಿ ಮೊರಾಸ್ ರವರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಸನ್ಮಾನ..
ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯ್ದ ಸಿ.ಎಲ್.ಸಿ ಸಂಸ್ಥೆಯ ಸದಸ್ಯರುಗಳ ಮಕ್ಕಳಾದ ಶೈಕ್ಷಣಿಕ ಕ್ಷೇತ್ರದಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್(97.28%) ಪಡೆದ ಎಲಿನಾ ಕ್ರಿಸ್ಟಿನಾ ಪಿಂಟೊ(ಜೋನ್ ಪಿಂಟೊರವರ ಪುತ್ರಿ), 89.76% ಪಡೆದ ಜೇಡನ್ ಕುಟಿನ್ಹಾ(ಜೋಯೆಲ್ ಕುಟಿನ್ಹಾರವರ ಪುತ್ರ), ವಿಐಟಿ ಬೋಪಾಲ್ ವಿಶ್ವವಿದ್ಯಾಲಯದಲ್ಲಿ ಏರೋಸ್ಟೇಸ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 9.1 CGPE ಪಡೆದಿರುವ ಕ್ಯಾಲ್ವಿನ್ ಫೆಬಿಯನ್ ಮೊರಾಸ್(ಸಿಪ್ರಿಯಾನ್ ಮೊರಾಸ್ ರವರ ಪುತ್ರ), ಕ್ರೀಡಾ ಕ್ಷೇತ್ರದ ಕ್ರಿಕೆಟ್ ನಲ್ಲಿ ರಾಜ್ಯ ಅಂತರ್ ವಲಯ ಮಹಿಳೆಯರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಏಂಜಲಿಕಾ ಮೆಲಾನಿ ಪಿಂಟೊ (ಡಾ.ಎಲ್ಯಾಸ್ ಪಿಂಟೊರವರ ಪುತ್ರಿ), ಮೈಸೂರು ವಲಯ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಶಾನ್ ಜೋಸೆಫ್ ಲೋಬೊ(ನರೇಶ್ ಲೋಬೊರವರ ಪುತ್ರ),ಅಂಡರ್ 14 ಅಂತರ್ ವಲಯ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಕ್ರಿಸ್ ಏಂಜೆಲೊ ಪಿಂಟೊ(ಡಾ.ಎಲ್ಯಾಸ್ ಪಿಂಟೊರವರ ಪುತ್ರ)ರವರುಗಳನ್ನು ಹಾಗೂ ಸಿ.ಎಲ್.ಸಿ ಸಂಸ್ಥೆಗೆ ಸದಾ ನೆರವಿನ ಹಸ್ತ ಚಾಚುವ ಪೋಷಕರಾದ ಸಿಎ ಆಲ್ವಿನ್ ರೊಡ್ರಿಗಸ್ ಹಾಗೂ ಲ್ಯಾನ್ಸಿ ರೊಡ್ರಿಗಸ್ ಸಹೋದರರನ್ನು ಸನ್ಮಾನಿಸಲಾಯಿತು.