ಮುಂಡೂರು: ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಜಂಟಿ ಆಶ್ರಯದಲ್ಲಿ ವನಮಹೋತ್ಸವ -ದೇವಳದ ಗಣೇಶ ಚತುರ್ಥಿಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಪಜಿಮಣ್ಣು ಇಲ್ಲಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಮತ್ತು ದೇವಳದ ಗಣೇಶ ಚತುರ್ಥಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಜು.30ರಂದು ನಡೆಯಿತು.


ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಕಣ್ಣಾರಾಯ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷೆ ವೇದಾವತಿ ಮಾತನಾಡಿ ಕ್ಲಬ್, ಪರಿಸರ ಕಾಳಜಿಯಿಂದ ಇಂತಹ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದ್ದು ಈ ಬಾರಿ ದೇವಳದ ಸಮಿತಿಯೊಂದಿಗೆ ಜಂಟಿ ಕಾರ್ಯಕ್ರಮವನ್ನು ಆಯೋಜಿಸಲು ಒಪ್ಪಿಗೆ ನೀಡಿರುವುದಕ್ಕೆ ಸಮಿತಿ ಅಧ್ಯಕ್ಷರನ್ನು ಹಾಗೂ ಸಮಿತಿ ಸದಸ್ಯರನ್ನು ಅಭಿನಂದಿಸಿದರು. ನಾವು ಈ ದಿನ ಗಿಡ ನೆಟ್ಟರೆ ಮಾತ್ರ ಸಾಲದು ಅದನ್ನು ಬೆಳೆಸಿ ಮರವನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಸಾಮಾಜಿಕ ಅರಣ್ಯದ ಉಪವಲಯ ಅರಣ್ಯಾಧಿಕಾರಿ ಯಶೋಧರ್ ಮಾತನಾಡಿ ಕಾಡು ಉಳಿಸಿ ಬೆಳೆಸುವ ಔಚಿತ್ಯದ ಬಗ್ಗೆ ಹಾಗೂ ಪ್ರಾಣಿ ಪಕ್ಷಿಗಳ ರಕ್ಷಣೆಯ ಬಗ್ಗೆ ಹಾಗೂ ಮಾನವನ ಕರ್ತವ್ಯಗಳ ಬಗ್ಗೆ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ್ದ ಮುಂಡೂರು ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಮಾತಾಡಿ ಮನುಷ್ಯನ ಸ್ವಾರ್ಥ ಸ್ವಭಾವದಿಂದಾಗಿ ಪರಿಸರ ನಾಶವಾಗುತ್ತಿದ್ದು ಇದು ಮುಂದುವರೆದರೆ ಮನುಷ್ಯನ ಉಸಿರಾಟಕ್ಕೆ ಆಮ್ಲಜನಕವೇ ಇಲ್ಲದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಕಣ್ಣಾರಾಯ ಮಾತನಾಡಿ ಈ ದೇವಳದಲ್ಲಿ ಪ್ರತೀ ವರ್ಷ ಕತ್ತಾರಿನಲ್ಲಿ ಉದ್ಯಮಿಯಾಗಿರುವ ಕೊಡುಗೈ ದಾನಿ ರವಿ ಶೆಟ್ಟಿ ನೇಸರ ಕಂಪ ಅವರ ಪ್ರಾಯೋಜಕತ್ವದಲ್ಲಿ ವನಮಹೋತ್ಸವ ನಡೆಯುತ್ತಿದ್ದು ಈ ವರ್ಷ ಬಿಡುವಿನ ಅಭಾವದಿಂದ ಇದುವರೆಗೆ ಸಾಧ್ಯವಾಗಿಲ್ಲ ಇನ್ನು ಮುಂದೆಯೂ ಪ್ರತೀ ವರ್ಷ ಇದನ್ನು ಆಚರಿಸಲಾಗುವುದು ಎಂದು ಹೇಳಿದರು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತುಗೆ ಇದೇ ಸಂದರ್ಭದಲ್ಲಿ ಅವರು ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಕ್ಲಬ್‌ನ ಕಾರ್ಯದರ್ಶಿ ಅನುಸೂಯ ಬಾಯಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಕೋಶಾಧಿಕಾರಿ ಸುಪ್ರೀತ್ ಕಣ್ಣಾರಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೊಡುಗೈ ದಾನಿಯಾದ ಹೆಗ್ಗಪ್ಪ ರೈ ಪೊನೋನಿಯವರಿಗೆ ಹಾಗೂ ಮುಂಬರುವ ಗಣೇಶ ಚತುರ್ಥಿಗೆ ಗಣೇಶನ ವಿಗ್ರಹ ಪ್ರಾಯೋಜಕರಾದ ಪ್ರಸಾದ್‌ ರೈ ಕೊಡಂಕಿರಿ ಅವರಿಗೆ ಗಣ್ಯರು ಗಿಡ ವಿತರಿಸಿದರು. ಬಳಿಕ ಭಕ್ತಾದಿಗಳಿಗೂ ಗಿಡ ವಿತರಿಸಲಾಯಿತು.


ವ್ಯವಸ್ಥಾಪನಾ ಸಮಿತಿ ಸದಸ್ಯ ಧನಂಜಯ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಷಷ್ಠಿ ಮಹಾಪೂಜೆ ನಡೆದು ಶ್ರೀ ದೇವರಿಗೆ ಗಣೇಶ ಚತುರ್ಥಿಯ ಆಮಂತ್ರಣ ಪತ್ರಿಕೆ ಸಮರ್ಪಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗೇಶ ಕುದ್ರೆತ್ತಾಯರ ಮೂಲಕ ಶ್ರೀ ದೇವರ ಪ್ರಸಾದವನ್ನು ಗಣ್ಯರಿಗೆ ನೀಡಲಾಯಿತು. ದೇವಳದ ಪ್ರಬಂಧಕ ಪ್ರಸಾದ್ ಬೈಪಾಡಿತ್ತಾಯ ಸಹಕರಿಸಿದರು. ತಿಂಗಳ ಷಷ್ಠಿಯ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಗಣೇಶ್ ಶೆಟ್ಟಿ ಹಾಗೂ ದಯಾನಂದ ರೈ ಮತ್ತು ಊರಿನ ಭಕ್ತಾದಿಗಳು, ಅನೇಕ ಗಣ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ ಸಾಲಿಯಾನ್ ಪಜಿಮಣ್ಣು, ಪದ್ಮಯ್ಯ ನಾಯ್ಕ ಬಂಡಿಕಾನ, ಪದ್ಮಯ್ಯ ಗೌಡ ಗುತ್ತಿನಪಾಲು, ಶಾರದಾ ಬಂಡಿಕಾನ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಸುಬ್ರಹ್ಮಣ್ಯ ರಾವ್ ಮತ್ತು ರಾಮಣ್ಣ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here