ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2025-26ನೆ ಸಾಲಿನ ಪೋಷಕರ ಸಭೆ ನಡೆಯಿತು.
ಶಾಲಾ ಸಂಚಾಲಕರಾದ ಸವಣೂರು ಸೀತಾರಾಮ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಡಳಿತ ಮಂಡಳಿ, ಶಿಕ್ಷಕರು ಪೋಷಕರು ಮತ್ತು ವಿದ್ಯಾರ್ಥಿಗಳು ಜೊತೆ ಸೇರಿದಾಗ ಮಾತ್ರ ವಿದ್ಯಾಸಂಸ್ಥೆ ಸರ್ವಾಂಗೀಣ ಬೆಳವಣಿಗೆ ಆಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಯವರು ಶಿಕ್ಷಣವು ಬರೀ ಅಂಕಕ್ಕೆ ಸೀಮಿತವಾಗದೆ ವಿದ್ಯಾರ್ಥಿಯ ಸರ್ವತೋಮುಖ ಆಭಿವೃದ್ಧಿಗೆ ಕಾರಣವಾಗಬೇಕು, ಮಗುವಿನ ಪ್ರಗತಿಯಲ್ಲಿ ಶಿಕ್ಷಕರು ಮತ್ತು ಹೆತ್ತವರು ಸಮಾನ ಜವಾಬ್ದಾರರು ಎಂದು ಮಾತಾನಾಡಿದರು. ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಅಡ್ವಕೇಟ್ ಎಸ್ ಸುಧೀರ್ ತೋಳ್ಪಾಡಿಯವರು ಪೋಷಕರನ್ನು ಉದ್ದೇಶಿಸಿ, ಜೀವನವೇ ಒಂದು ಕಲಿಕೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ನುಡಿದರು.

2024-25ನೇ ಸಾಲಿನ ಮತ್ತು ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮ್ ಪ್ರಸಾದ್ ಕಲಾಯಿಯವರು ಕಲಿಕೆಯು ಬರೀ ಶಾಲೆ ಗೆ ಸೀಮಿತವಾಗದೆ ಮನೆಯಲ್ಲಿ ಇದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕು ಎಂದು ನುಡಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಉಪಾಧ್ಯಕ್ಷರಾಗಿ ತಾರಾನಾಥ ಕಾಯರ್ಗ ಆಯ್ಕೆ ಆಗಿರುತ್ತಾರೆ ಉಳಿದಂತೆ ಅಶ್ರಫ್ ಎಂ. (ಪಿಯುಸಿ ವಿಭಾಗ), ತಿಮ್ಮಪ್ಪ ಪೂಜಾರಿ, (ಹೈಸ್ಕೂಲ್ ವಿಭಾಗ), ಜೈನುದ್ದೀನ್ ತೋಟದಮೂಲೆ (ಪ್ರಾಥಮಿಕ ವಿಭಾಗ) ಮತ್ತು ಕವಿತಾ (ಕೆ ಜಿ ವಿಭಾಗ) ಇವರು ನಿರ್ದೇಶಕರಾಗಿ ಆಯ್ಕೆಯಾದರು.
ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಪೋಷಕರ ಶಾಲಾ ನಿಯಾಮಾವಳಿಗಳನ್ನು ಪೋಷಕರ ಪ್ರಶ್ನೆಗಳಿಗೆ ಉತ್ತರ ನೀಡಿದರು
ಕಾರ್ಯಕ್ರಮವನ್ನು ಶಿಕ್ಷಕಿ ಚೇತನಾ ನಿರೂಪಿಸಿ, ರಸಾಯನಶಾಸ್ತ್ರ ಉಪನ್ಯಾಸಕಿ ಉಮಾವತಿ ಎಂ. ಸ್ವಾಗತಿಸಿ, ಶಿಕ್ಷಕಿ ಅನಿತಾ ವಂದನಾರ್ಪನೆ, 8ನೇ ತರಗತಿಯ ಕೃಪಾಲಿ ಮತ್ತು ಬಳಗದವರು ಪ್ರಾರ್ಥನೆ ಮತ್ತು 7ನೇ ತರಗತಿಯ ಮೋಕ್ಷ ಕೆ ಯು ಸಂವಿಧಾನ ಪೀಠಿಕೆಯ ವಾಚಿಸಿದರು.