ಪುತ್ತೂರು: ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ “ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ “ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಯೋಗದಲ್ಲಿ ” FROM CAMPUS TO CAREER” ಕಾರ್ಯಗಾರ ನಡೆಯಿತು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೇಘಶ್ರೀ ಪ್ರಾಸ್ತವಿಕ ಮಾತುಗಳನ್ನಾಡಿ “ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್” ನಲ್ಲಿ ನಡೆಯುವ ವಿವಿಧ ರೀತಿಯ ಸ್ಪರ್ಧೆಗಳ ಕುರಿತು ವಿವರಿಸಿದರು ಮತ್ತು ವಿದ್ಯಾರ್ಥಿಗಳು ತನ್ನನ್ನು ತಾನು ಸಕ್ರಿಯವಾಗಿ ಸ್ಪರ್ಧಾತ್ಮಕವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಂಗ್ಲ ಭಾಷಾ ವಿಭಾಗದ ಉಪನ್ಯಸಾಕಿ ದೀಪ್ತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮುಖ್ಯ ಅಂಶಗಳ ಕುರಿತು ವಿವರಿಸಿದರು. ಹಾಗೆಯೇ ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಸಂವಹನ ಹಾಗೂ ಶಿಷ್ಟಾಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಶ್ಮಿ ಸಂಯೋಜಕಿ ಐಕ್ಯೂಎಸಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಶಹನ ಎಂ ಎಚ್ ಸ್ವಾಗತಿಸಿ, ರಶ್ಮಿ ವಂದಿಸಿ, ಜನನಿ ಡಿ ಜಿ ನಿರೂಪಿಸಿದರು.