ಒಡಿಯೂರು ಶ್ರೀ ಜನ್ಮದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

0

ನೆಲ್ಯಾಡಿ: ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ಗೋಳಿತ್ತೊಟ್ಟು ಘಟಸಮಿತಿ ವತಿಯಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಜನ್ಮದಿನದ ಅಂಗವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾಮಂದಿರ ಹಾಗೂ ಗೋಳಿತ್ತೊಟ್ಟು ಪೇಟೆಯಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ತಿರ್ಲೆ ದೇವಸ್ಥಾನದ ಮೊಕ್ತೇಸರರಾದ ಮಾಧವ ಸರಳಾಯ, ಗೋಳಿತ್ತೊಟ್ಟು ಘಟಸಮಿತಿಯ ಅಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಯಶವಂತ ರೈ ಗೋಳಿತ್ತೊಟ್ಟು, ವಲಯದ ಸಂಯೋಜಕಿ ಭಾರತಿ ಡಿ.ಕೆ., ಗೋಳಿತ್ತೊಟ್ಟು ಗ್ರಾಮದ ಸೇವಾದೀಕ್ಷಿತೆ ತಿರುಮಲೇಶ್ವರಿ, ಸಂಘದ ಸದಸ್ಯರಾದ ಲೀಲಾವತಿ, ಸಂತೋಷ್, ಪುರುಷೋತ್ತಮ, ದಿನೇಶ್, ಸಾಂತಪ್ಪ, ಭಾಗವಹಿಸಿದ್ದರು. ಗೋಳಿತ್ತೊಟ್ಟು ಸಿದ್ಧಿವಿನಾಯಕ ಭಜನಾಮಂದಿರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತೃಮಂಡಳಿ ವರಲಕ್ಷ್ಮಿ ಪೂಜೆ ಸಮಿತಿ ಅಧ್ಯಕ್ಷೆ ಯಶುಂತಲ ಹಾಗೂ ಸದಸ್ಯರು ಭಾಗವಹಿಸಿದ್ದರು.

ಗೋಳಿತ್ತೊಟ್ಟು ಪೇಟೆಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ರಿಕ್ಷಾ ಚಾಲಕರಾದ ತೀರ್ಥೆಶ್, ಹನೀಫ್, ಪ್ರದೀಪ್, ಶ್ಯಾಮ್ ಪ್ರಸಾದ್, ಸುರೇಶ್, ಬೆಳ್ಳಿಯಪ್ಪ, ನೋಣಯ್ಯ ಮರಂದೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here