ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ಪ್ರಥಮ ಸುತ್ತಿನ ವಾರ್ಡ್ ಸಭೆ ಆ.6 ಮತ್ತು ಆ.೭7ರಂದು ನಡೆಯಲಿದೆ.
ಆ.6ರಂದು ಬೆಳಿಗ್ಗೆ ಗಂಟೆ 11ಕ್ಕೆ ಭಕ್ತಕೋಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸರ್ವೆ-1 ವಾರ್ಡ್ ಸಭೆ ನಡೆಯಲಿದ್ದು ಸರ್ವೆ-2 ಮತ್ತು 3 ವಾರ್ಡ್ ಸಭೆ ಸಂಜೆ ಗಂಟೆ 4ಕ್ಕೆ ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ನಡೆಯಲಿದೆ.
ಆ.7ರಂದು ಬೆಳಿಗ್ಗೆ ಗಂಟೆ 10ಕ್ಕೆ ಮುಂಡೂರು-2 ವಾರ್ಡ್ ಸಭೆ ಮುಂಡೂರು ಗ್ರಾ.ಪಂ ಸಭಾಂಗಣದಲ್ಲಿ ನಡೆಯಲಿದ್ದು ಮುಂಡೂರು-1 ವಾರ್ಡ್ ಸಭೆ ಸಂಜೆ ಗಂಟೆ 3ಕ್ಕೆ ಪಾಪೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ಕೆಮ್ಮಿಂಜೆ-2 ವಾರ್ಡ್ ಸಭೆ ಮದ್ಯಾಹ್ನ ಗಂಟೆ 12ಕ್ಕೆ ನೈತ್ತಾಡಿ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.
ಮುಂಡೂರು ಗ್ರಾ.ಪಂ ಗ್ರಾಮ ಸಭೆ ಆ.11ರಂದು ಮುಂಡೂರು ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಹಾಗೂ ಪಿಡಿಓ ಮನ್ಮಥ ಅಜಿರಂಗಳ ತಿಳಿಸಿದ್ದಾರೆ.