ಆ.10: ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದಿಂದ ಅಟಿಡೊಂಜಿ ದಿನ ಕಾರ್ಯಕ್ರಮ

0

ಆಟಿ ಕಳೆಂಜ ಸ್ಟೇಜ್ ಪ್ರದರ್ಶನ ಬೇಡ :ಚಂದ್ರ ಇದ್ಪಾಡಿ

ಪುತ್ತೂರು: ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಪುತ್ತೂರು, ವಲಯ ಸಮಿತಿಗಳು ಹಾಗು ಕರ್ನಾಟಕ ರಾಜ್ಯ ಪಾಣಾರ, ಅಜಲ, ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಪುತ್ತೂರು ಇದರ ಸಂಯುಕ್ತ ಅಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಮತ್ತು ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಆ.10ರಂದು ಬೆಳಿಗ್ಗೆ ಗಂಟೆ 9ಕ್ಕೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಚಂದ್ರ ಇದ್ಪಾಡಿಯವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಾನಪದ ಕವಿ ಮತ್ತು ಸಂಶೋಧಕ ಲಕ್ಷ್ಮಣ ಪೊನಾರಂ ಆಡೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಪಾಣಾರ, ಅಜಲ, ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ದಯಾನಂದ ಸೇರಾ ಸಹಿತ ಹಲವಾರು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಗುರುತಿಸಲ್ಪಡುವ ಸಾಧಕರನ್ನು ಸನ್ಮಾನಿಸಲಾಗುವುದು. ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ, ರಸಪ್ರಶ್ನೆ, ಒಳಾಂಗಣ ಆಟಗಳು, ಸಭಾ ಕಾರ್ಯಕ್ರಮದ ಬಳಿಕ ಭೋಜನ ವಿರಾಮ. ಮಧ್ಯಾಹ್ನ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರವಿ ಎಂಡೆಸಾಗು, ರಾಜ್ಯ ಸಂಘದ ಸದಸ್ಯ ವಚನ್ ಸೇಡಿಯಾಪು, ಉಪಾಧ್ಯಕ್ಷ ಶ್ರೀಧರ್ ಸೇಡಿಯಾಪು ಉಪಸ್ಥಿತರಿದ್ದರು.

ಆಟಿ ಕಳೆಂಜ ಸ್ಟೇಜ್ ಪ್ರದರ್ಶನ ಬೇಡ
ಆಟಿ ಕಳೆಂಜ ಒಂದು ಸಂಪ್ರದಾಯ. ಅದನ್ನು ಸ್ಟೇಜ್ ಪ್ರದರ್ಶನ ಮಾಡಬಾರದು. ಒಂದು ವೇಳೆ ಸ್ವಜಾತಿ ಬಾಂಧವರು ಕೂಡಾ ಈ ಕಾರ್ಯಕ್ರಮಕ್ಕೆ ಹೋಗಿ ಪ್ರದರ್ಶನ ನೀಡಿದರೆ ಅವರಲ್ಲೂ ನಮ್ಮ ವಿನಂತಿ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಬೇಡಿ. ಕಟ್ಟುಪಾಡು ಇರಲಿ. ಇದು ನಮ್ಮ ಸಮುದಾಯಕ್ಕೆ ಮತ್ತು ದೈವಗಳಿಗೆ ಅಪಮಾನ ಮಾಡುವ ವಿಚಾರ. ಪ್ರತಿ ವರ್ಷ ನಾವು ಎಲ್ಲರಲ್ಲೂ ಮನವಿ ಮಾಡುತ್ತಾ ಬಂದಿದ್ದೇವೆ. ಈ ಬಾರಿಯೂ ಅದೇ ಮನವಿಯನ್ನು ಮುಂದಿಟ್ಟುಕೊಂಡು ದಯಮಾಡಿ ಆಟಿಕಳೆಂಜವನ್ನು ಸ್ಟೇಜ್ ಪ್ರದರ್ಶನ ಮಾಡಬೇಡಿ.
ಚಂದ್ರ ಇದ್ಪಾಡಿ, ಸ್ಥಾಪಕ ಅಧ್ಯಕ್ಷರು
ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ

LEAVE A REPLY

Please enter your comment!
Please enter your name here