ನೆಲ್ಯಾಡಿ: ಜೆಸಿಐ ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜುಂಜೂನ್ವಾಲಾರವರು ಆ.5ರಂದು ಸಂಜೆ ನೆಲ್ಯಾಡಿ ಜೆಸಿಐಗೆ ಅಧಿಕೃತ ಭೇಟಿ ನೀಡಲಿದ್ದಾರೆ.
ಅಧ್ಯಕ್ಷರಿಗೆ ವಾಹನ ಜಾಥಾದ ಮೂಲಕ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಬಳಿಕ ನೆಲ್ಯಾಡಿ ಗಾಂಧಿಮೈದಾನಕ್ಕೆ ಸಿಮೆಂಟ್ ಬೆಂಚುಗಳ ಲೋಕಾರ್ಪಣೆ ನಡೆಯಲಿದೆ. ಬಳಿಕ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಜೆಸಿಐ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ನೆಲ್ಯಾಡಿ ಜೆಸಿಐ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.