ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ನವಗ್ರಹ ಗುಡಿಯಲ್ಲಿ ತಾಳಮದ್ದಳೆ “ಕರ್ಣ ಪರ್ವ” ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಎಲ್ ಎನ್ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಸಹಕರಿಸಿದರು.
ಮುಮ್ಮೇಳದಲ್ಲಿ, ಗುಂಡ್ಯಡ್ಕ ಈಶ್ವರ ಭಟ್ (ಕರ್ಣ)ಭಾಸ್ಕರ ಬಾರ್ಯ ಮತ್ತು ಮಾಂಬಾಡಿ ವೇಣುಗೋಪಾಲ ಭಟ್ (ಶ್ರೀ ಕೃಷ್ಣ), ಗುಡ್ಡಪ್ಪ ಬಲ್ಯ (ಅರ್ಜುನ), ವಿ.ಕೆ.ಶರ್ಮ ಅಳಿಕೆ (ಶಲ್ಯ ) ಗಣರಾಜ ಭಟ್ ಬಡೆಕ್ಕಿಲ (ವೃದ್ಧ ವಿಪ್ರ), ಸುಬ್ಬಯ್ಯ ರೈ ಸುಳ್ಯಪದವು (ಸರ್ಪಾಸ್ತ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ರಾವ್ ಸಹಕರಿಸಿದರು.